www.karnatakatv.net : ಪ್ರಸ್ತುತ ಸುರೇಶ್ ರೈನಾ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಬಾರಿ ಅವರು ಎಂಎಸ್ ಧೋನಿಗಾಗಿ ಮತ್ತೊಮ್ಮೆ ಐಪಿಎಲ್ ಟ್ರೋಫಿ ಗೆಲ್ಲಲೇಬೇಕೆಂಬ ಉತ್ಸಾಹದಲ್ಲಿ ಇದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ, ನಾನು ಹಾಗೂ ಧೋನಿ ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಲವು ಬಾರಿ ಜೊತೆಯಾಗಿ ಆಡಿದ್ದೇವೆ. ಧೋನಿ ಟೀಂ ಇಂಡಿಯಾ ಹಾಗೂ ಸಿಎಸ್ಕೆ ತಂಡದ ಪರವಾಗಿ 200ಕ್ಕೂ ಅಧಿಕ ಪಂದ್ಯಗಳನ್ನ ಆಡಿದ್ದಾರೆ.
ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ. ನನಗೆ ಅವರು ಹಿರಿಯ ಸಹೋದರ ಇದ್ದಂತೆ. ನಾವು ಜೊತೆಯಾಗಿ ಅನೇಕ ಟ್ರೋಫಿಗಳನ್ನ ಗೆದ್ದಿದ್ದೇವೆ. ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಇದೆ. ಧೋನಿ ನಾಯಕತ್ವದ ತಂಡದಲ್ಲಿ ಆಟವಾಡೋದೇ ಒಂದು ಮಜಾ. ಧೋನಿ ಆಟಗಾರರಿಗೆ ಸ್ವಾತಂತ್ರ್ಯ ನೀಡುತ್ತಾರೆ. ಈ ಬಾರಿ ದುಬೈಗೆ ಹೋಗುವ ನಾವು ಎಂಎಸ್ ಧೋನಿಗಾಗಿ ಟ್ರೋಫಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.