www.karnatakatv.net : ರಾಯಚೂರು : ಇಂದಿನಿಂದ ಶಾಲೆಗಳು ಮತ್ತೆ ಆರಂಭಗೊಂಡಿವೆ. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ವಿದ್ಯಾದೇಗುಲ ತೆರೆದಿದ್ದು, ರಾಯಚೂರಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ದೃಶ್ಯ ಕಂಡುಬಂತು.
ಇಂದು ಬೆಳಗ್ಗೆ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು, ಸ್ವಾಗತ ಕೋರುವ ಬ್ಯಾನರ್ ಗಳ ಮೂಲಕ ಮಕ್ಕಳನ್ನು ಸ್ವಾಗತಿಸಿದ್ವು. ಹೀಗಾಗಿ ಸಹಜವಾಗಿಯೇ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು. ವಿದ್ಯಾರ್ಥಿಗಳೂ ಕೂಡ ಸಂತಸದಿಂದ ಶಾಲೆಗೆ ಹಾಜರಾದ್ರು. ಇನ್ನು ಇಷ್ಟೂ ದಿನ ಮನೆಯಲ್ಲೇ ಇದ್ದ ವಿದ್ಯಾರ್ಥಿಗಳೂ ಕೂಡ ತಮ್ಮ ಸಹಪಾಠಿಗಳು ಹಾಗೂ ನೆಚ್ಚಿನ ಶಿಕ್ಷಕರನ್ನು ಕಂಡು ಖುಷಿ ಪಟ್ರು.
ರಾಯಚೂರು ನಗರ ಹೊರವಲಯದ ಯರಮರಸ್ ಸರ್ಕಾರಿ ಪ್ರೌಢ ಶಾಲೆಯ ಮುಂಭಾಗದಲ್ಲಿ ಮಾವಿನ ತೋರಣ ಕಟ್ಟಿ ಸಿಂಗಾರ ಗೊಳಿಸಿದ್ದರು. ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಅಡಿ ಅಂತರ ಕಾಯ್ದಿರಿಸಲಾಗಿತ್ತು . ಮಕ್ಕಳಿಗೆ ಸ್ಯಾನಿಟೈಸ್ ಮಾಡಿ ತರಗತಿಗೆ ಕಳುಹಿಸಿಕೊಡಲಾಯ್ತು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು