ಬೆಂಗಳೂರು: ಹಬ್ಬ-ಹರಿದಿನ ಬಂತಂದ್ರೆ ಸಾಕು ಎಲ್ಲ ವಸ್ತುಗಳ ದರ ಗಗನಕ್ಕೆ ಏರಿ ಬಿಡುತ್ತೆ.. ಅದರಲ್ಲೂ ಖಾಸಗಿ ಬಸ್ಗಳ ಪ್ರಯಾಣ ದರವಂತೂ ದುಬಾರಿಯಾಗಿಬಿಡುತ್ತದೆ. ಗೌರಿ-ಗಣೇಶ ಹಬ್ಬ (Gowri Ganesha Festival)ಕ್ಕೆ ದಿನಗಣನೆ ಶುರುವಾಗಿದ್ದು, ಹಬ್ಬ ಸನ್ನಿಹಿತವಾಗ್ತಿರುವಂತೆ ಖಾಸಗಿ ಬಸ್ ದರ (Bus Fare Hike) ದುಪ್ಪಟ್ಟಾಗಿದೆ. ಹಬ್ಬಕ್ಕೆ ಊರಿಗೆ ಹೋಗಲು ಪ್ಲ್ಯಾನ್ ಮಾಡಿರುವವರ ಜೇಬಿಗೆ ಕತ್ತರಿ ಬೀಳಲಿದೆ.
ಪ್ರತಿ ಹಬ್ಬದ ಸಮಯದಲ್ಲೂ ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆ (Bus Fare Hike) ಆಗುವುದು ಮಾಮೂಲಿ. ಗೌರಿ-ಗಣೇಶ ಹಬ್ಬ ವಾರಾಂತ್ಯದಲ್ಲಿ ಬಂದಿರುವುದರಿಂದ ತಮ್ಮ ತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಇದು ಕೂಡ ಎಲ್ಲೋ ಒಂದ್ಕಡೆ ಬಸ್ ರೇಟ್ ಜಾಸ್ತಿಯಾಗೋಕೆ ಕಾರಣವಾಗಿದೆ. ಸೆಪ್ಟೆಂಬರ್ 3ರಿಂದಲೇ ಕೆಲ ಖಾಸಗಿ ಬಸ್ಗಳ ಪ್ರಯಾಣದ ದರ ಏರಿಕೆಯಾಗಲಿವೆ.
ಚೌತಿಗೆ ಖಾಸಗಿ ‘ದರ’ಬಾರ್! (ಹೆಡ್ಡರ್)
ಮಾರ್ಗ ಹಾಲಿ ದರ ಏರಿಕೆ
ಬೆಂಗಳೂರು To ಉಡುಪಿ ₹800 ₹1,800
ಬೆಂಗಳೂರು To ಬಳ್ಳಾರಿ ₹550 ₹1,400
ಬೆಂಗಳೂರು To ಶಿರಸಿ ₹800 ₹2,000
ಬೆಂಗಳೂರು To ಹುಬ್ಬಳ್ಳಿ ₹700 ₹1,800
ಬೆಂಗಳೂರು To ವಿಜಯಪುರ ₹900 ₹1,900
ಬೆಂಗಳೂರು To ಮಧುರೈ ₹800 ₹2,000
KSRTC ಟಿಕೆಟ್ ದರ ಏರಿಕೆ ಬಿಸಿ (ಹೆಡ್ಡರ್)
ಮಾರ್ಗ ಹಾಲಿ ದರ ಏರಿಕೆ
ಬೆಂಗಳೂರು To ಹುಬ್ಬಳ್ಳಿ ₹911-₹1,086 ₹982-₹1,380
ಬೆಂಗಳೂರು To ಉಡುಪಿ ₹731-₹1,535 ₹971-₹1,665
ಬೆಂಗಳೂರು To ಮಂಗಳೂರು ₹714-₹1,424 ₹773-₹1,546
ಬೆಂಗಳೂರು To ವಿಜಯಪುರ ₹710-₹1,437 ₹710-₹1,548
ಗೌರಿ-ಗಣೇಶ ಹಬ್ಬಕ್ಕೆ ಖಾಸಗಿ ಬಸ್ಗಳ ಜೊತೆ ಕೆಎಸ್ಆರ್ಟಿಸಿ ಕೂಡ ಪ್ರಯಾಣ ದರ ಏರಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಐಷಾರಾಮಿ ಬಸ್ಗಳು ಹಾಗೂ ಹಬ್ಬಕ್ಕೆ ವಿಶೇಷವಾಗಿ ನಿಯೋಜಿಸಲಾಗಿರುವ ಬಸ್ಗಳ ಟಿಕೆಟ್ ದರವನ್ನ ಹೆಚ್ಚಿಸಿದೆ. ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳ ಪ್ರಯಾಣ ದರ ಹೆಚ್ಚಾಗಿರುವುದರಿಂದ ಹಬ್ಬಕ್ಕೆ ತಮ್ಮೂರಿಗೆ ಹೋಗಲು ಪ್ಲ್ಯಾನ್ ಮಾಡಿರೋ ಜನ ಏನ್ ಹಬ್ಬ ಮಾಡೋದೋ ಏನೋ ಅಂತ ತಮ್ಮಲ್ಲೇ ಗೊಣಗಿಕೊಳ್ತಿದ್ದಾರೆ.