Monday, April 14, 2025

Latest Posts

ರಾಯಚೂರಲ್ಲಿ ಮತ್ತೋರ್ವ ಸರ್ಕಾರಿ ಸಿಬ್ಬಂದ್ದಿ ನಾಪತ್ತೆ..!

- Advertisement -

www.karnatakatv.net: ರಾಯಚೂರು :  ನಾಪತ್ತೆಯಾಗಿದ್ದ ರಾಯಚೂರಿನ ಎಸಿ ಕಛೇರಿಯ ಎಫ್ ಡಿ  ಎ ಶವವಾಗಿ ಪತ್ತೆಯಾದ ಬೆನ್ನಲ್ಲೇ ಇದೀಗ ಮತ್ತೋರ್ವ ಸರ್ಕಾರಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ನಗರದ ಸ್ಥಳೀಯ ಭೂ ದಾಖಲೆ ಇಲಾಖೆ ಕಚೇರಿಯ ಎರಡನೇ ದರ್ಜೆ ಸಹಾಯಕ ಎಚ್.ಶಿವಪ್ಪ ಕಾಣೆಯಾಗಿರೋದು ತಡವಾಗಿ ಬೆಳಕಿಗೆ ಬಂದಿದೆ. ಆ.26ರಂದು ಕಚೇರಿಗೆ ಹೋಗಿ ಬರುವುದಾಗಿ ತಿಳಿಸಿದ್ದ ಶಿವಪ್ಪ ಈವರೆಗೂ ಪತ್ತೆಯಾಗದ ಬಗ್ಗೆ ಪತ್ನಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಶಿವಪ್ಪನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ  ಕುರಿತು  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss