For Money: ಕತ್ತರಿಯಿಂದ ಬೆನ್ನಿಗೆ ಇರಿದು ಪರಾರಿ

ಹುಬ್ಬಳ್ಳಿ;ವ್ಯಕ್ತಿಯೋರ್ವನಿಗೆ ಹಣಕಾಸಿನ ವಿಚಾರವಾಗಿ ಕತ್ತರಿಯಿಂದ ಬೆನ್ನಿಗೆ ಚುಚ್ಚಿರುವ ಘಟನೆ ನಗರದ ಆನಂದನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಘಟನೆ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಅಯಾಜ್ ಎಂಬಾತ ಮಂಜುನಾಥಗೆ ೫ ಸಾವಿರ ರೂ. ನೀಡಿದ್ದ ಎನ್ನಲಾಗಿದ್ದು, ಇಲ್ಲಿನ ಬಾರ್ ಅಂಗಡಿವೊಂದರಲ್ಲಿ ಮಂಜುನಾಥ ಪವಾರ್ ಅಲಿಯಾಸ್ ವಸ್ತ್ರ ಮಂಜ್ಯಾ ಹಾಗೂ ಪ್ರದೀಪ್ ಕದಂ ಮದ್ಯಪಾನ ಮಾಡಿದ್ದಾರೆನ್ನಲಾಗಿದ್ದು, ತದನಂತರ ಆನಂದನಗರದಲ್ಲಿನ ಲಕ್ಷ್ಮೀ ಹಾರ್ಡ್‌ವೇರ್ ಹತ್ತಿರ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕಕೆ ಹೋದ ಸಂದರ್ಭದಲ್ಲಿ ಮಂಜುನಾಥ ಪವಾರ್ ಕತ್ತರಿಯಿಂದ ಪ್ರದೀಪನ ಬೆನ್ನಿನ ಭಾಗಕ್ಕೆ ಚುಚ್ಚಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಾಣಾಪಾಯದಿಂದ  ಪಾರಾಗಿದ್ದಾನೆ.ಈ ದುರ್ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹಲ್ಲೆ ಮಾಡಿದ ಮಂಜುನಾಥನನ್ನು ವಶಕ್ಕೆ ಪಡೆದುಕೊಂಡಿದ್ದು, ಅಯಾಜ್ ಪರಾರಿಯಾಗಿದ್ದಾನೆ.

 

DK Shivakumar : ಶಾಸಕರ ಭವನ ಉದ್ಘಾಟಸಿದ ಡಿಸಿಎಂ ಡಿಕೆಶಿ

Viral video: ಯುವಕನ ಬೆತ್ತಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ಬಾಯಿ ಮುಚ್ಚಿಸಿದ್ರಾ ಪ್ರಭಾವಿಗಳು…?

Basavaraj Bommai : ಎಸ್ಸಿಪಿಟಿಎಸ್ ಪಿ ಹಣ ವಾಪಸ್ ಪಡೆಯದಿದ್ದರೆ, ರಾಜ್ಯಾದ್ಯಂತ ಹೋರಾಟ : ಬೊಮ್ಮಾಯಿ

About The Author