Friday, November 22, 2024

Latest Posts

ಕಣ್ಣುಗಳ ಅರೋಗ್ಯದ ರಹಸ್ಯ ….!

- Advertisement -

Health tips:

ಮನುಷ್ಯನ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಣ್ಣುಗಳು ಅತಿ ಮುಖ್ಯ ವಾಗಿದೆ. ಹೀಗಾಗಿಯೇ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ತುಂಬಾ ಮುಖ್ಯವಾಗಿದೆ . ಮಾಲಿನ್ಯ, ಧೂಳು ನಿಮ್ಮ ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ,eye ಮೇಕಪ್ಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿಗೆ ಹಾನಿಯಾಗುತ್ತೆ. ಕೆಲವರಿಗೆ ಹಲವಾರು ಕಾರಣಗಳಿಂದಾಗಿ ಕಪ್ಪು ವರ್ತುಲ ಕಾಣಿಸಿಕೊಂಡಿರುತ್ತೆ ಇಂತಹ ಸಮಸ್ಯೆಗಳು ನಿಮ್ಮ ಕಣ್ಣುಗಳನ್ನು ನಿಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತದೆ .ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಗಂಭೀರ ರೋಗಗಳು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ.ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ , ಮೊಬೈಲ್ ವೀಕ್ಷಣೆಯಿಂದ ಕಣ್ಣುಗಳ ಮೇಲೆ ದುಷ್ಫರಿಣಾಮಗಳು ಬೀರುತ್ತದೆ . ಇದರಿಂದ ದೃಷ್ಟಿದೋಷದ ಸಮಸ್ಯೆ ಕಾಡುತ್ತದೆ. ಹೀಗೆ ಕಣ್ಣುಗಳ ಆರೋಗ್ಯವನ್ನು ಕಾಪಾಡುವುದು ಹೇಗೆ ಎಂದು ನೋಡ್ಕೊಂಡು ಬರೋಣ ಬನ್ನಿ . .

ನಿಮ್ಮ ಕಣ್ಣುಗಳು ಆರೋಗ್ಯವಾಗಿರಲು ಉತ್ತಮ ಆಹಾರ ಪದ್ಧತಿ ಬಹಳ ಮುಖ್ಯ. ಉತ್ತಮ ಪೋಷಕಾಂಶಗಳಿಂದ ಕೂಡಿರುವ ಆಹಾರವನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳನ್ನು ದೂರ ಮಾಡಬಹುದು. ಇದರಲ್ಲಿ, ವಿಟಮಿನ್ , ಸಿ, , ಖನಿಜಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಕಣ್ಣುಗಳು ಆರೋಗ್ಯವಾಗಿರುತ್ತದೆ. ಮಕ್ಕಳು,ವೃದ್ದರು ಎಲ್ಲರು ತರಕಾರಿಗಳನ್ನು , ಹಣ್ಣುಗಳನ್ನು, ಮತ್ತು ಸೊಪ್ಪು ಪ್ರತಿದಿನ ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು ರೀತಿಯ ಆಹಾರಗಳನ್ನು ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .ಕಣ್ಣಿನ ದೃಷ್ಟಿ ಹೆಚ್ಚಿಸಲು, ಕ್ಯಾರೋಟಿನ್ ಹೊಂದಿರುವ ಆಹಾರವನ್ನು ಸೇವಿಸಬೇಕು. ಕ್ಯಾರೋಟಿನಾಯ್ಡ್ಗಳನ್ನು ಪಡೆಯಲು ಹಸಿರು ಎಲೆಗಳ ತರಕಾರಿಗಳು ಮತ್ತು ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಿ. ಕ್ಯಾರೊಟಿನಾಯ್ಡ್ಕಣ್ಣುಗಳಲ್ಲಿನ ವರ್ಣದ್ರವ್ಯದ ಸಾಂದ್ರತೆಯನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ .

ಗಿನ ದಿನಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮುಂದೆ ದಿನವೆಲ್ಲ ಸಮಯ ಕಳೆಯುತ್ತಾರೆ ಇದು ಖಂಡಿತ ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ .ಇದಕ್ಕಾಗಿ ಕನ್ನಡಕಗಳನ್ನು ಧರಿಸಬೇಕು ಹಾಗು ಕಂಪ್ಯೂಟರ್ ಗ್ಲಾಸ್ಗಳು ಈಗ ಎಲ್ಲೆಡೆ ಲಭ್ಯವಿದೇ. ಹಾಗು ಬಿಸಿಲಿಗೆ ಹೋಗುವ ಮುನ್ನ ಸನ್ ಗ್ಲಾಸ್ ಧರಿಸುವುದು ಅಗತ್ಯವಾಗಿದೆ ಇದು UV A ಮತ್ತು UV B ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ .ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ ಪ್ರತಿ ನಿಮಿಷವೂ ನಿಮ್ಮ ಕಣ್ಣುಗಳಿಂದ 20 ಅಡಿ ದೂರದಲ್ಲಿರುವ ಯಾವುದನ್ನಾದರೂ 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಬಹುದು.ಕಣ್ಣುಗಳಲ್ಲಿ ಬಳಲಿಕೆ, ಕಣ್ಣುಗಳ ಕೆಳಭಾಗದಲ್ಲಿ ಚರ್ಮ ಜೋತುಬಿದ್ದಂತಾಗಿರುವುದು, ಹೀಗೆ ಕಣ್ಣಿನ ಯಾವುದಾದರೂ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.

ಚಳಿಗಾಲ ಬಂತು ಹುಷಾರ್..! ಇನ್ನು ಇದನ್ನು ತಿನ್ನುವುದನ್ನು ಕಡಿಮೆ ಮಾಡಿ…!

ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದಕ್ಕೆ ಕಾರಣವೇನು ಗೊತ್ತೇ …?

ರಕ್ತಹೀನತೆಗೆ ಇವುಗಳೇ ಕಾರಣ…?!

 

 

- Advertisement -

Latest Posts

Don't Miss