ಕೊರೊನಾ, ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈಗ ಒಂದೆರಡು ತಿಂಗಳಿಂದ ಎಲ್ಲರೂ ಪ್ರವಾಸ, ಶಾಪಿಂಗ್, ಮದುವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ನಟಿಮಣಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಾ ಚಳಿಗಾಲವನ್ನ ಕಳೆಯುತ್ತಿರುವ ಹಲವು ನಟಿಮಣಿಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತರಹತರಹದ ಫೋಟೋವನ್ನ ಹರಿಬಿಡುತ್ತಿದ್ದಾರೆ. ಹಲವು ದಿನಗಳಿಂದ ಎಲ್ಲಾ ನಟಿಮಣಿಯರೂ ಮಾಲ್ಡೀವ್ಸ್‌ಗೆ ಯಾಕೆ ಹೋಗ್ತಿದ್ದಾರೆ..? ಮಾಲ್ಡೀವ್ಸ್ ಎಲ್ಲಾ ನಟಿ ಮಣಿಯರ ಫೇವರಿಟ್ ಪ್ಲೇಸ್ ಅಂತೆಲ್ಲಾ ಸುದ್ದಿಯಾಗಿತ್ತು. ಆದ್ರೆ ರಿಯಾಲಿಟಿನೇ ಬೇರೆ ಇದೆ..
ಕೊರೊನಾ ಕಾರಣದಿಂದ ಮಾಲ್ಡೀವ್ಸ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿನ ಪ್ರವಾಸೋದ್ಯಮವನ್ನ ಮತ್ತೆ ಮೊದಲಿನಂತೆ ಅಭಿವೃದ್ಧಿಪಡಿಸಲು ಮುಂದಾಗಿರುವ ಅಲ್ಲಿನ ಸರ್ಕಾರ, ನಟಿಮಣಿಯರ ಮೂಲಕ ಪ್ರಮೋಷನ್ ನೀಡಲು ಪ್ಲಾನ್ ಮಾಡಿದೆ.
ಈ ಕಾರಣಕ್ಕೆ ನಟಿ ಮಣಿಯರನ್ನೆಲ್ಲ ಪ್ರವಾಸಕ್ಕೆ ಆಮಂತ್ರಿಸಿರುವ ಇಲ್ಲಿನ ಪ್ರವಾಸೋದ್ಯಮ ಇಲಾಖೆಯವರು, ನಟಿಮಣಿಯರಿಗೆ ಫ್ರೀ ಟಿಕೇಟ್ ನೀಡಿದೆ. ಈ ಕಾರಣಕ್ಕೆ ಹಲವು ನಟಿ ಮಣಿಯರು ತಾವು ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡಿದ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಹಿರೋಯಿನ್‌ಗಳ ಫೋಟೋ ನೋಡಿಯಾದ್ರೂ, ಜನ ಮಾಲ್ಡಿವ್ ಪ್ರವಾಸದ ಪ್ಲಾನ್ ಮಾಡ್ಲಿ ಅನ್ನೋ ಇಲ್ಲಿನ ಪ್ರವಾಸೋದ್ಯಮ ಇಲಾಖೆಯ ಪ್ಲಾನ್ ಆಗಿದೆ.

ಫ್ರೀ ಟೀಕೇಟ್ ನೀಡುವುದರ ಜೊತೆಗೆ ಷರತ್ತು ಕೂಡ ವಿಧಿಸಿದ್ದಾರೆ. ಅದೇನೆಂದರೆ, ನಟಿಯರ ಊಟ, ವಸತಿ, ಶಾಪಿಂಗ್ ಸೇರಿ ಎಲ್ಲದರ ಖರ್ಚನ್ನೂ ಹೊಟೇಲ್ ನೋಡಿಕೊಳ್ಳುತ್ತದೆ. ಆದ್ರೆ ಅವರೊಂದಿಗೆ ಓರ್ವ ಫೋಟೋಗ್ರಾಫರ್‌ನನ್ನು ಕಳುಹಿಸಲಾಗುತ್ತದೆ. ನಟಿಯರು ಅರ್ಧಂಬರ್ಧ ಬಟ್ಟೆ ತೊಟ್ಟು, ಫೋಟೋಗೆ ಗ್ಲಾಮರ್ ಮತ್ತು ಹಾಟ್ ಆಗಿ ಕಾಣುವಂತೆ ಪೋಸ್ ನೀಡಬೇಕು. ಮತ್ತು ಪ್ರತಿದಿನ ಆ ಫೋಟೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ, ಫೋಟೋ ತೆಗೆಸಿಕೊಂಡ, ಸ್ಥಳದ ಹೆಸರನ್ನ ಹಾಕಬೇಕು. ಮತ್ತು ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಷರತ್ತು ವಿಧಿಸಿತ್ತು.

ಇನ್ನು ಈ ವಿಷಯ ಬಹಿರಂಗವಾಗಿದ್ದಾದ್ರೂ ಹೇಗೆ ಅನ್ನೋ ಪ್ರಶ್ನೆಗೆ ಉತ್ತರ, ಬಾಲಿವುಡ್ ಸೆಲೆಬ್ರಿಯೊಬ್ಬರು ಈ ಬಗ್ಗೆ ಬಾಯಿತಪ್ಪಿ ಮಾತನಾಡಿದ್ದಾರೆ. ಆಗ ಈ ಸುದ್ದಿ ಬಹಿರಂಗವಾಗಿದೆ. ಕಾಜಲ್ ಅಗರ್‌ವಾಲ್, ತಾಪ್ಸಿ ಪನ್ನು, ಶಾನ್ವಿ ಶ್ರೀವಾತ್ಸವ್, ಸೋನಾಕ್ಷಿ ಸಿನ್ಹಾ, ಪ್ರಣೀತಾ, ದಿಶಾ ಪಠಾಣಿ, ಸಮಂತಾ ಸೇರಿ ಹಲವು ನಟಿ ಮಣಿಯರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿ, ಫೋಟೋ, ವೀಡಿಯೋ ಶೂಟ್ ಮಾಡಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
