ನಟಿ ಗಿರೀಜಾ ಓಕ್ ಮಗನ ಶಾಲೆಯಲ್ಲಿ ಟಿಫಿನ್ ಸಿಸ್ಟಮ್ ಎಷ್ಟು ಡಿಫ್ರೆಂಟ್ ಆಗಿದೆ ನೋಡಿ..

Bollywood: ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ರುಕ್ಮಿಣಿ ವಸಂತ್ ಅವರನ್ನು ಬದಿಗಿರಿಸಿ, ನ್ಯಾಶನಲ್ ಕ್ರಶ್ ಆಗಿರುವಂಥ ನಟಿ ಅಂದ್ರೆ ಮರಾಠಿ ನಟಿ ಗಿರಿಜಾ ಓಕ್. ಗಿರಿಜಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, ತಮ್ಮ ಮಗನ ಟಿಫಿನ್ ವಿಚಾರವಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.

ಅದೇನಂದ್ರೆ, ಎಲ್ಲ ಕಡೆ ಪ್ರತೀದಿನ ತಾಯಂದಿರು, ಇಂದು ಮಕ್ಕಳಿಗೆ ಏನು ಟಿಫಿನ್ ರೆಡಿ ಮಾಡ್ಲಿ ಅಂತಾ ಟೆನ್ಶನ್ ಮಾಡಿಕ“ಳ್ಳುತ್ತಾರೆ. ಆದರೆ ಗಿರಿಜಾ ಶಾಲೆಯಲ್ಲಿ ಆ ತಲೆನೋವೇ ಇಲ್ಲ. ಯಾಕಂದ್ರೆ ಅಲ್ಲಿ ಟಿಫಿನ್ ಬಳಸುವ ರೀತಿ ಅಷ್ಟು ಸೂಪರ್ ಆಗಿದೆ.

ಪ್ರತೀದಿನ 1 ಮನೆಯಿಂದ ಇಡೀ ಕ್ಲಾಸಿಗೆ ಅಡುಗೆ ಬರುತ್ತದೆ. ಕ್ಲಾಸಿನಲ್ಲಿ 25ರಿಂದ 26 ಮಕ್ಕಳಿದ್ದಾರೆ. ಹಾಗಾಗಿ ತಿಂಗಳಿಗೆ 1 ಬಾರಿ ಓರ್ವ ಪೋಷಕರಿಗೆ ಅಡುಗೆ ಮಾಡುವ ಪಾಳಿ ಬರುತ್ತದೆ. 1 ದಿನ ಅಡುಗೆ ಮಾಡಿ ಕಳುಹಿಸುವಾಗ 50 ಜನಕ್ಕಾಗುವಷ್ಟು ಅಡುಗೆ ಮಾಡಬೇಕು. ಯಾಕಂದ್ರೆ ಶಿಕ್ಷಕರು, ಬೇರೆ ಸಿಬ್ಬಂದಿಗಳು, ಮಕ್ಕಳು ಎಲ್ಲರೂ ಅದೇ ಅಡುಗೆ ಊಟ ಮಾಡುತ್ತಾರೆ.

ಕ್ಲಾಸಿನಲ್ಲಿ ಮಂಗಳೂರಿಯನ್, ಪಂಜಾಬಿ, ಗುಜರಾತಿ, ಬೆಂಗಾಲಿ, ಮಹಾರಾಷ್ಟ್ರಿಯನ್ ಹೀಗೆ ದೇಶದ ಬೇರೆ ಬೇರೆ ಭಾಗದ ಜನರಿದ್ದಾರೆ. ಅವರೆಲ್ಲ ಪ್ರತೀದಿನ ತಮ್ಮ ಭಾಗದ ರುಚಿಯ ಅಡುಗೆ ಮಾಡಿ ಕಳುಹಿಸುತ್ತಾರೆ. ಪ್ರತೀದಿನ ಅನ್ನ, ಸಾಂಬಾರ್, ಪಲ್ಯ, ಚಪಾತಿ, ಸಲಾಡ್ ಇರಲೇಬೇಕು. ಇದರ ಜತೆ ನೀವು ಏನು ಬೇಕಾದ್ರೂ ನೀಡಬಹುದು. ಬೇಸಿಗೆಯಲ್ಲಿ ಮಜ್ಜಿಗೆ ನೀಡುವುದಾದರೆ ನೀಡಬಹುದು.

ಹೀಗೆ ಶಾಲೆಯ ರೂಲ್ಸ್. ಇದರಿಂದ ಗಿರಿಜಾ ಅವರ ಮಗ ಸೇರಿ, ಅವನ ಕ್ಲಾಸಿನಲ್ಲಿರುವ ವಿದ್ಯಾರ್ಥಿಗಳು ಪ್ರತೀದಿನ ಬೇರೆ ಬೇರೆ ವಿಧವಾದ ಅಡುಗೆ ರುಚಿ ನೋಡುತ್ತಾರೆ. ಅಲ್ಲದೇ ಯಾರ ಮನೆಯಿಂದ ಅಡುಗೆ ಬಂದಿರುತ್ತದೆಯೋ, ಅಂದು ಕ್ಲಾಸಿನಲ್ಲಿ ಆ ವಿದ್ಯಾರ್ಥಿ ಸ್ಪೆಶಲ್ ಆಗಿರುತ್ತಾನೆ.

ಅವನಿಗೆ ಪ್ರಾರ್ಥನೆಯ ಲೈನ್‌ನಲ್ಲಿ ಮೊದಲು ನಿಲ್ಲುವ ಅವಕಾಶ. ಮೊದಲು ಪುಸ್ತಕ ಓದುವ ಅವಕಾಶ, ಮತ್ತು ತಾನು ತಂದ ಅಡುಗೆಯಲ್ಲಿ ಎಲ್ಲರಿಗೂ ಯಾವುದಾದರೂ 1 ಪದಾರ್ಥ ಬಡಿಸುವ ಅವಕಾಶ ಹೀಗೆ ಆ ದಿನ ಆ ಮಗುವಿಗೆ ಸ್ಪೆಶಲ್ ದಿನವಾಗಿರುತ್ತದೆ ಎಂದು ಗಿರಿಜಾ ಓಕ್ ತಮ್ಮ ಮಗನ ಶಾಲೆಯ ಸ್ಪೇಶಾಲಿಟಿ ವಿವರಿಸಿದ್ದಾರೆ.

About The Author