Web Story: ಸಿನೀಯರ್ ಸಿಟಿಜನ್ ಕಾರ್ಡ್‌ನಿಂದ ಎಷ್ಟೆಲ್ಲ ಸೌಲಭ್ಯ ಸಿಗಲಿದೆ ನೋಡಿ..

Web Story: ನಿಮ್ಮ ಮನೆಯಲ್ಲಿಯೂ 60 ದಾಟಿರುವ ವೃದ್ಧರಿದ್ದರೆ, ನೀವು ಈಗಲೇ ಅವರಿಗಾಗಿ ಸಿನೀಯರ್ ಸಿಟಿಜನ್ ಕಾರ್ಡ್ ಮಾಡಿಸಿಬಿಡಿ. ಏಕೆಂದರೆ ಇದರಿಂದ ಅವರಿಗೆ ಹಲವು ರೀತಿಯಲ್ಲಿ ಸಹಾಯವಾಾಗುತ್ತದೆ. ಹಾಗಾದ್ರೆ ಈ ಕಾರ್ಡ್‌ನಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.

ಸಿನಿಯರ್ ಸಿಟಿಜನ್ ಕಾರ್ಡ್ ಇದ್ದರೆ, ಅವರಿಗೆ ಫ್ಲೈಟ್ ಟಿಕೇಟ್ ಮೇಲೆ ಶೇ.25ರಷ್ಟು ಆಫ್ ಸಿಗುತ್ತದೆ. ಈ ಮೂಲಕ ನಿಮ್ಮ ತಂದೆ ತಾಯಿ ಅಥವಾ 60 ವರ್ಷ ಮೇಲ್ಪಟ್ಟವರು ಆರಾಮವಾಗಿ ಕಡಿಮೆ ಬೆಲೆಗೆ ವಿಮಾನ ಪ್ರಯಾಣ ಮಾಡಬಹುದು.

ಅಷ್ಟೇ ಅಲ್ಲದೇ, ಟ್ರೇನ್ ಟಿಕೇಟ್ ಮೇಲೆ ನಿಮಗೆ ಶೇ.50ರಷ್ಟು ರಿಯಾಯಿತಿ ಸಿಗುತ್ತದೆ. ಅಲ್ಲದೇ ಲೋವರ್ ಬರ್ತ್ ಪ್ರೆಫರೆನ್ಸ್ ಕೂಡ ಸಿಗುತ್ತದೆ. ಇನ್ನು ಬಸ್‌ನಲ್ಲಿ ಫ್ರೀ ಪಾಸ್ ಕೂಡ ಸಿಗುತ್ತದೆ. ಇದರಿಂದಲೂ ನೀವು ಕಡಿಮೆ ಬೆಲೆಗೆ ಬಸ್‌ನಲ್ಲಿಯೂ ಪ್ರಯಾಣಿಸಬಹುದು.

ಇನ್ನು ಆಸ್ಪತ್ರೆ ಖರ್ಚು ಕೂಡ ಕಡಿಮೆಯಾಗುತ್ತದೆ. ನಿಮ್ಮ ತಂದೆ ತಾಯಿಗೆ ಆಸ್ಪತ್ರೆ ಸೇರಿಸುವ ಅವಶ್ಯಕತೆ ಇದ್ದಾಗ, ನೀವು ಈ ಕಾರ್ಡ್ ತೋರಿಸಿದರೆ, ಚಿಕಿತ್ಸೆ ವೆಚ್ಚ ಕಡಿಮೆಯಾಗುತ್ತದೆ. ಇನ್ನು ಎಫ್‌ಡಿ ಇದ್ದರೆ, ಅದರಲ್ಲಿಯೂ ಹೆಚ್ಚು ಬಡ್ಡಿ ಸಿಗುತ್ತದೆ. ಇದರ ಜತೆ ಇನ್ನೂ ಹಲವು ಸೌಲಭ್ಯ ಸಿಗಲಿದೆ. ಹಾಗಾದ್ರೆ ನಿಮ್ಮ ಮನೆಯ ಹಿರಿಯರಿಗೆ ಈ ಕಾರ್ಡ್ ಇಲ್ಲದಿದ್ದಲ್ಲಿ, ಬೇಗ ಸಿನಿಯರ್ ಸಿಟಿ ಜನ್ ಕಾರ್ಡ್ ಮಾಡಿಸಿ.

About The Author