ಸ್ವಯಂ ಘೋಷಿತ ಗೋರಕ್ಷಕ ಪಕ್ಷವು ಗೋಮಾತೆಗೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ: ಪ್ರಿಯಾಂಕ್ ಖರ್ಗೆ

Political News: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಅವರು ಮಾಧ್ಯಮದವರ ಜತೆ ಮಾತನಾಡಿದ್ದು, ಗೋಮಾಂಸ ತಿನ್ನುವವರ ಓಟ್ ನಿಮಗೆ ಬೇಕಾ ಎಂದು ಕೇಳಿದ್ದಕ್ಕೆ, ಹೌದು ನಮಗೆ ಬೇಕು. ನಾವು ಗೋಮಾಂಸ ತಿನ್ನಲು ಯಾರಿಗೂ ಬೇಡವೆಂದಿಲ್ಲ. ಆದರೆ ನಿಮ್ಮ ನಿಮ್ಮ ಮನೆಗಳಲ್ಲಿ ಗೋಮಾಂಸ ತಿನ್ನಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಗೋಮಾಂಸ್ ಮಾಡಿ ಊಟ ಹಾಕಬೇಡಿ ಎಂದಿದ್ದೇವೆ ಎಂದು ಅವರು ಉತ್ತರಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು, ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿ ಸಿಎಂ ಹಿಮಂತ್ ಬಿಸ್ವಾ ಶರ್ಮಾ, ಮನೆಯಲ್ಲೇ ಗೋಮಾಂಸ ತಿನ್ನಲು ಅವಕಾಶ ಮಾಡಿಕ“ಡುತ್ತಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ಕೇಂದ್ರ ಸಚಿವರು ಗೋಮಾಂಸ ರಫ್ತಿನಿಂದ ಲಾಭ ಗಳಿಸುತ್ತಾರೆ. ಭಾರತೀಯ ಜನತಾಪಕ್ಷವು ಸ್‌ವತಃ ಗೋಮಾಂಸ ರಫ್ತಿಗೆ ಸಂಬಂಧಿಸಿದ ಉದ್ಯಮದಿಂದ ಕೋಟಿ ಕೋಟಿ ದೇಣಿಗೆ ಪಡೆಯುತ್ತದೆ.

ಮೋಹನ್ ಭಾಗವತ್ ಮತ್ತು ಮೋದಿ ಇದನ್ನು ಅನುಮೋದಿಸುತ್ತಾರೆಯೇ? ಇದಕ್ಕೆ ಉನ್ನತ ಮಟ್ಟದಲ್ಲಿ ಅನುಮೋದನೆ ನೀಡಲಾಗಿದೆಯೇ? ಗೋಮಾಂಸ ಸೇವನೆ ಮತ್ತು ಗೋಮಾಂಸ ಲಾಭ ಎರಡಕ್ಕೂ ಪ್ರತಿಫಲ ನೀಡುವ ಹೊಸ ಹಿಂದುತ್ವ ಮಾದರಿ ಇದೇನಾ?

“ನಯ ಭಾರತ” ಎಂದು ಕರೆಯಲ್ಪಡುವ ಯುಗದಲ್ಲಿ, ಸ್ವಯಂ ಘೋಷಿತ ಗೋರಕ್ಷಕ ಪಕ್ಷವು ಗೋಮಾತೆಗೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author