ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಕಿತವಾಡ ಜಲಪಾತಕ್ಕೆ ಪಿಕ್ನಿಕ್ ಎಂದು ತೆರಳಿದ್ದ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳು ಹೋಗಿ ಜಲಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಅಸೀಯಾ ಮುಜಾವರ್ (17), ತಸ್ಮಯ (20), ಕುರ್ದಿಶ್ ಹಾಸಂ ಪಟೇಲ್ (20), ರುಕ್ಸಾರ್ ಬಿಸ್ತಿ (20) ಮೃತ ವಿದ್ಯಾರ್ಥಿಗಳು.
ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್ ಹೀರೋ..!
ಇವರೆಲ್ಲರೂ ಬೆಳಗಾವಿಯ ಕಾಮತ ಗಲ್ಲಿಯ ಮದರಾಸದಲ್ಲಿ ಇದ್ದು ಓದುತ್ತಿದ್ದರು. ಯುವತಿಯರು ಎಲ್ಲರು ಸೇರಿ ನೀರಿನ ಅಂಚಿಗೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಈಜು ಬಾರದ ಕಾರಣ 4 ಜನ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಮೃತ ವಿದ್ಯಾರ್ಥಿಗಳ ದೇಹಗಳನ್ನು ಮತ್ತು ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಜಿಲ್ಲಾಸ್ಪತ್ರೆಗೆ ತರಲಾಯಿತು.
ರೆಡಿ ಆನ್ ವ್ಹೀಲ್ಸ್ ಅಪ್ಲಿಕೇಶನ್ (ROW )ಲೋಕಾರ್ಪಣೆ ಮಾಡಿದ ಧ್ರುವ ಸರ್ಜಾ