www.karnatakatv.net : ಸಾಲು ಸಾಲು ಹಬ್ಬಗಳು ಬರುತ್ತಿದ್ದು ಇನ್ನೇನು ದೀಪಾವಳಿ ಹಬ್ಬವು ಸಮೀಪಿಸುತ್ತಿದೆ, ಈ ಹಬ್ಬಕ್ಕೆ ಮಣ್ಣಿನ ಹಣತೆಗಳನ್ನು ಮಾರುಕಟ್ಟೆ ಒದಗಿಸುವ ಬಗ್ಗೆ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ದೀಪಗಳ ಹಬ್ಬವಾದ ದೀಪಾವಳಿಗೆ, ಮಣ್ಣಿನ ಹಣತೆಗಳನ್ನು ಮಾರಾಟ ಮಾಡಲು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ತಯಾರಿ ನಡೆಸುತ್ತಿದ್ದಾರೆ. ಗ್ರಾಮೀಣ ಜೀವನೋಪಾಯ ಅಭಿಯಾನದ ಎಂಡಿ ಮಂಜುಶ್ರೀ ಮತ್ತು ಇತರೆ ಅಧಿಕಾರಿಗಳ ಜತೆ ಅಶ್ವಥ್ ನಾರಾಯಣ ಸಭೆ ನಡೆಸಿ, ಮಾಲ್ ಗಳು ಸೇರಿದಂತೆ ಹಲವೆಡೆ ಹಣತೆ ಮಾರಾಟಕ್ಕೆ ವ್ಯವಸ್ಥೆ ಮಾಡಿ, ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನವೆಂಬರ್ ನಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಇನ್ನೇನು ಬೀದಿ ಬದಿಗಳಲ್ಲಿ, ಅಂಗಡಿಗಳಲ್ಲಿ ಮಣ್ಣಿನ ಹಣತೆಗಳ ಮಾರಾಟ ಶುರುವಾಗುತ್ತಿದೆ. ಮಾಲ್ ಗಳಲ್ಲಿ ಕೂಡ ಮಣ್ಣಿನ ಹಣತೆಗಳ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದರೆ ಅನೇಕ ಸ್ವಸಹಾಯ ಗುಂಪುಗಳಿಗೆ, ಗ್ರಾಮೀಣ ಭಾಗದ ಕುಲುಮೆಗಾರರಿಗೆ ಹೆಚ್ಚು ಅವಕಾಶ ಸಿಕ್ಕಂತಾಗುತ್ತದೆ.