Sunday, September 8, 2024

Latest Posts

40 ವರ್ಷದ ಬಳಿಕ ಗುರು-ಶಿಷ್ಯ ಹೆಸರಿನಲ್ಲಿ ಸಿನಿಮಾ.. ಇವರೇ ನೋಡಿ ಹೊಸ ಗುರು-ಶಿಷ್ಯರು…

- Advertisement -

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಗುರು-ಶಿಷ್ಯರು ಅಂದತಕ್ಷಣ ಥಟ್ ಅಂತಾ ನೆನಪಿಗೆ ಬರುವುದು ಸಾಹಸ ಸಿಂಹ ವಿಷ್ಣುವರ್ಧನ್-ದ್ವಾರಕೀಶ್ ಅಭಿನಯದ ಸಿನಿಮಾ. 1981ರಲ್ಲಿ ಖ್ಯಾತ ನಿರ್ದೇಶಕ ಹೆಚ್.ಆರ್. ಭಾರ್ಗವ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಹೇಮ ಚೌಧರಿ, ಜಯಮಾಲಿನಿ ಹಾಗೂ ಮಂಜುಳ ನಟಿಸಿದ್ದರು. ಇದೇ ಗುರು-ಶಿಷ್ಯರು ಸಿನಿಮಾ ಹೆಸರಿನಲ್ಲಿ ಮತ್ತೊಂದು ಹೊಸ ಸಿನಿಮಾ ಬರುತ್ತಿದೆ.

ಗುರು-ಶಿಷ್ಯರು ಸಿನಿಮಾದಲ್ಲಿ ಕಾಮಿಡಿ ಕಿಲಾಡಿ ಶರಣ್

ಗುರು-ಶಿಷ್ಯರು ಅನ್ನೋ ಟೈಟಲ್ ಇಟ್ಕೊಂಡು ಬರ್ತಿರುವ ಈ ಹೊಸ ಸಿನಿಮಾದಲ್ಲಿ ಕಾಮಿಡಿ ಕಿಲಾಡಿ ಶರಣ್ ನಾಯಕ ನಟನಾಗಿ ಅಭಿನಯಿಸ್ತಿದ್ದಾರೆ. ಇವತ್ತು ಈ ಸಿನಿಮಾದ ಟೈಟಲ್ ನ್ನ ಹಿರಿಯ ನಟ ದ್ವಾರಕೀಶ್ ಅನಾವರಣಾ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಶರಣ್ ಟ್ವೀಟ್ ಮಾಡಿ ದ್ವಾರಕೀಶ್ ಅವರಿಗೆ ಧನ್ಯವಾದ ತಿಳಿಸುವುದರ ಜೊತೆಗೆ ಅವರ ಹೊಸ ಚಿತ್ರಕ್ಕೆ ಹರಸುವಂತೆ ಕೇಳಿಕೊಂಡಿದ್ದಾರೆ.

ಅಂದಹಾಗೇ ಈ ಸಿನಿಮಾದ ಮೂಲಕ ಡೈರೆಕ್ಟರ್ ತರುಣ್ ಸುಧೀರ್ ನಿರ್ಮಾಪಕನಾಗಿ ಬಡ್ತಿ ಪಡೆದಿದ್ದು, ಜಡೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಿ.ಅಂಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

- Advertisement -

Latest Posts

Don't Miss