Saturday, November 29, 2025

Latest Posts

ಸೆಪ್ಟೆಂಬರ್‌ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರತ್ತೆ ನೋಡಿ..!

- Advertisement -

ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕೋಮಲ ಸ್ವಭಾವದವರಾಗಿರುತ್ತಾರೆ.

ಇವರು ಹೆಚ್ಚಾಗಿ ಬೇರೆಯವರಿಗಿಂತ ತಮ್ಮನ್ನು ತಾವು ಪ್ರೀತಿಸುತ್ತಾರೆ.

ಇವರು ಮನಸ್ಸಿನಿಂದ ಉದಾರವಾಗಿದ್ದರೂ ಕೂಡ ಎಲ್ಲರೆದರು ತಾವು ಕಠೋರ ಮನಸ್ಸಿನವರು ಎಂದು ತೋರಿಸಿಕೊಳ್ಳುತ್ತಾರೆ.

ಬೇರೆಯವರಿಗೆ ಸಹಾಯ ಮಾಡುವ ಮನಸ್ಸುಳ್ಳ ಇವರು ಬೇರೆಯವರಿಂದ ತಮ್ಮ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಕೂಡಾ ಚೆನ್ನಾಗಿ ತಿಳಿದಿರುತ್ತಾರೆ.

ಇನ್ನು ಹಿಡಿದ ಕೆಲಸ ಮಾಡಿ ಮುಗಿಸುವ ತನಕ ಇವರಿಗೆ ಸಮಾಧಾನವಿರುವುದಿಲ್ಲ.

ಕಷ್ಟದ ಸಮಯದಲ್ಲಿಯೂ ಕೂಡ ಶಾಂತಿ ಮತ್ತು ಧೈರ್ಯದಿಂದ ಇರುವ ಕಲೆ ಇವರಿಗಿರುತ್ತದೆ.

ಜೀವನದಲ್ಲಿ ಇವರಿಗೆ ಬೇಕಾದ್ದೆಲ್ಲ ಸಿಕ್ಕರೂ ಕೂಡ, ಅದನ್ನವರು ಕಷ್ಟ ಪಟ್ಟೇ ಪಡೆದುಕೊಳ್ಳಬೇಕಾಗುತ್ತದೆ.

ಸುತ್ತಾಡೋದು ಅಂದ್ರೆ ಇವರಿಗೆ ತುಂಬಾ ಇಷ್ಟ. ಅಲ್ಲದೇ ಪ್ರತಿದಿನದ ರೂಟೀನ್‌ನಿಂದ ಇವರಿಗೆ ಬೋರ್ ಆಗಿ ಬೇರೆ ಬೇರೆ ಕೆಲಸಗಳಲ್ಲಿಯೂ ಇಂಟ್ರೆಸ್ಟ್ ತೋರಿಸ್ತಾರೆ.

ಈ ತಿಂಗಳಲ್ಲಿ ಜನಿಸಿದವರು ಒಬ್ಬಂಟಿಯಾಗಿರಲು ಇಷ್ಟ ಪಡುವುದಿಲ್ಲ. ಸ್ನೇಹಿತರೊಂದಿಗೆ ಅಥವಾ ಪರಿವಾರದೊಂದಿಗೆ ಇರಲು ಇಚ್ಛಿಸುತ್ತಾರೆ. ಅಲ್ಲದೇ, ಟ್ರೀಪ್, ಪಿಕ್‌ನಿಕ್, ಔಟಿಂಗ್ ಹೋಗುವ ಸಂದರ್ಭ ಬಂತೆಂದ್ರೆ ಇವರೆಂದಿಗೂ ರಾಜಿಯಾಗುವುದಿಲ್ಲ. ಯಾಕಂದ್ರೆ ಮೊದಲೇ ಹೇಳಿದ ಹಾಗೆ ಇವರು ಸುತ್ತಾಡಲು ತುಂಬಾ ಇಷ್ಟ ಪಡ್ತಾರೆ.

ಇವರಿಗೆ ಪುಸ್ತಕ ಓದುವುದೆಂದರೆ ತುಂಬಾ ಇಷ್ಟ. ಅಲ್ಲದೇ ಹೊಸ ಹೊಸ ವಿಷಯವನ್ನ ಕಲಿಯಲು ಬಯಸುತ್ತಾರೆ.

ಇನ್ನು ಇವರಿಗೆ ಹೆಚ್ಚು ಸಿಟ್ಟು ಬರುತ್ತದೆ. ಆದರೆ ಈ ಮಾತನ್ನ ಅವರು ಒಪ್ಪಿಕೊಳ್ಳುವುದಿಲ್ಲ.

ಇವರ ಮಾತನ್ನ ಯಾರೂ ಕೇಳದಿದ್ರೆ, ಸಿಟ್ಟು ಬಂದ್ರೆ ಇವರು ಜಗಳಾಡುವ ಹಂತಕ್ಕೂ ಹೋಗ್ತಾರೆ.

ಇವರ ಬಗ್ಗೆ ಬೇರೆಯವರು ತಮಾಷೆ ಮಾಡಿದ್ರೆ ಇವರಿಗಷ್ಟು ಇಷ್ಟವಾಗೋದಿಲ್ಲ. ಆದ್ರೆ ಇವರು ಬೇರೆಯವರಿಗೆ ತಮಾಷೆ ಮಾಡ್ತಾರೆ.

ಇನ್ನು ಪ್ರೀತಿ ವಿಷಯಕ್ಕೆ ಬಂದ್ರೆ ಇವರು ಅಷ್ಟಾಗಿ ಅದೃಷ್ಟವಂತರಿರುವುದಿಲ್ಲ. ಇವರು ಇಷ್ಟ ಪಟ್ಟವರು ಇವರಿಗೆ ಸಿಗೋದು ಕಷ್ಟ.

ಇವರ ಲಕ್ಕಿ ನಂಬರ್ 3,7,9, ಲಕ್ಕಿ ಕಲರ್ ಹಸಿರು, ಚಿನ್ನದ ಬಣ್ಣ, ಅದೃಷ್ಟದ ದಿನ ರವಿವಾರ, ಬುಧವಾರ, ಗುರುವಾರ.

- Advertisement -

Latest Posts

Don't Miss