ಯುಎಸ್ಎ:ಎಲ್ಲಾ ಅಥ್ಲೀಟ್ ಗಳ ಒಂದಲ್ಲಾ ಒಂದು ದಿನ ತಮ್ಮ ವಿದಾಯ ಹೇಳಲೇಬೇಕು. ಇದಕ್ಕೆ ಟೆನಿಸ್ ದಂತ ಕತೆ ಸೆರೆನಾ ವಿಲಿಯಮ್ಸ್ ಕೂಡ ಹೊರತಲ್ಲ.
ವಾರ ಪತ್ರಿಕೆಗೆ ಅಂಕವೊಂದನ್ನು ಬರೆದಿರುವ ಸೆರೆನಾ ವಿಲಯಮ್ಸ ಶೀಘ್ರದಲ್ಲೆ ವಿದಾಯ ಘೋಷಿಸುವುದಾಗಿ ಘೋಷಿಸಿದ್ದಾರೆ. ಆದರೆ ಯಾವಾಗ ಅನ್ನೋದನ್ನ ಬರೆದಿಲ್ಲ. ಇನ್ ಸ್ಟಾಗ್ರಾಂನಲ್ಲೂ ಕೆಲವೇ ವಾರಗಳಲ್ಲಿ ನಿವೃತ್ತಿಯಾಗುವುದಾಗಿ ಬರೆದಿದ್ದಾರೆ.
ವಾರ ಪತ್ರಿಕೆಯಲ್ಲಿ 23 ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸೆರೆನಾ ಫಾರ್ ವೆಲ್ ಎಂದು ಹೆಡ್ ಲೈನ್ ಹಾಕಿದ್ದಾರೆ. ನನ್ನನ್ನು ನಂಬಿ ನನಗೆ ಟೆನಿಸ್ ಮತ್ತು ಕುಟುಂಬದ ನಡುವೆ ಒಂದನ್ನು ಆಯ್ಕೆ ಮಾಡಲು ಇಷ್ಟವಿರಲಿಲ್ಲ.ಇದು ಒಳ್ಳೆಯದಲ್ಲ.ಆದರೆ ಈ ತಿಂಗಳು ನನಗೆ 41 ವರ್ಷ ತುಂಬುತ್ತಿದ್ದು ಏನು ಒಂದನ್ನು ಕೊಡುತ್ತೇನೆ ಎಂದು ಬರೆದಿದ್ದಾರೆ.
ಜೀವನದಲ್ಲಿ ಕೆಲವು ಸಂದರ್ಭಗಳು ಬೇರೆ ದಿಕ್ಕಿನತ್ತ ಹೋಗುವಂತೆ ನಮಗೆ ಮಾಡುತ್ತವೆ. ಆ ಸಂದರ್ಭಗಳು ತುಂಬ ಕಠಿಣವಾಗಿರುತ್ತವೆ. ಟೆನಿಸ್ ಅನ್ನ ಆನಂದಿಸಿದ್ದೇನೆ. ಆದರೆ ಕೌಂಟ್ ಡೌನ್ ಶೂರುವಾಗಿದೆ.
ನಾನು ತಾಯಿಯಾಗಿ ಕಾರ್ಯನಿರ್ವಹಿಸಬೇಕಿದೆ. ಇನ್ನು ಕೆಲವೇ ವಾರಗಳಲ್ಲಿ ಎಲ್ಲಾ ಗೊತ್ತಾಗಲಿದೆ ಎಂದು ಬರೆದಿದ್ದಾರೆ.

