ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರು ಪ್ರಖ್ಯಾತ ಧಾರಾವಾಹಿ ಜೊತೆ ಜೊತೆಯಲಿ ಸಿರಿಯಲ್‌ನ ನಿರ್ದೇಶಕ ಆರೂರು ಜಗದೀಶ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ.

ಈ ಬಗ್ಗೆ ಆರೂರು ಜಗದೀಶ್ ಪತ್ನಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಿಳಿಸಿದ್ದು, ನಿರ್ದೇಶಕ ಆರೂರು ಜಗದೀಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಶುಭಾಶಯಕೋರಿದವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ ಜಗದೀಶ್ ಪತ್ನಿ ಸ್ಮಿತಾ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಧನ್ಯವಾದ ತಿಳಿಸಿದ್ದಾರೆ.
ಲಾಕ್‌ಡೌನ್ ಇದ್ದಕಾರಣ ಸೀರಿಯಲ್ ಶೂಟಿಂಗ್ ಸ್ಥಗಿತಗೊಂಡಿತ್ತು, ಒಂದು ತಿಂಗಳ ಹಿಂದಷ್ಟೇ ಜೊತೆ ಜೊತೆಯಲಿ ಸಿರಿಯಲ್ ಶೂಟಿಂಗ್ ಶುರುವಾಗಿದ್ದು, ಆರೂರು ಜಗದೀಶ್ ತಮ್ಮ ಟೀಮ್‌ಗೆ ಪ್ರೋತ್ಸಾಹ ನೀಡಿ, ಟೀಮ್‌ನ ಕಾಳಜಿ ವಹಿಸಿ, ಶೂಟಿಂಗ್ ಸ್ಟಾರ್ಟ್ ಮಾಡೋ ಬಗ್ಗೆ ಕೆಲ ಮಾತುಗಳನ್ನ ಆಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಜೊತೆ ಜೊತೆಯಲಿ ಧಾರಾವಾಹಿಯ ಎನರ್ಜಿ ಬೂಸ್ಟರ್ ಆಗಿರುವಂಥ ಆರೂರು ಜಗದೀಶ್ ಅವರು ಧಾರಾವಹಿ ಶುರು ಮಾಡಿದ ಒಂದು ವಾರದಲ್ಲೇ ಚಾನೆಲ್‌ನ ಟಿಆರ್‌ಪಿಯನ್ನ ಹೆಚ್ಚು ಮಾಡೋದ್ರಲ್ಲಿ ಸಕ್ಸಸ್ ಆದ್ರೂ. ಅಷ್ಟೇ ಅಲ್ಲದೇ, ಧಾರಾವಾಹಿ ಶುರುವಾದ ಒಂದೇ ವಾರದಲ್ಲಿ ಎಲ್ಲ ಧಾರಾವಾಹಿಗಿಂತ ಹೆಚ್ಚು ಟಿಆರ್‌ಪಿ ಗಳಿಸಿದ ಖ್ಯಾತಿಯನ್ನ ಜೊತೆ ಜೊತೆಯಲ್ಲಿ ಸಿರೀಯಲ್ ಗಳಿಸಿದ್ದು, ಇದಕ್ಕೆ ಆರೂರು ಜಗದೀಶ್ ಆ್ಯಂಡ್ ಟೀಮ್ ಕಾರಣವಾಗಿತ್ತು.
ಆರೂರು ಜಗದೀಶ್ ಬೇಗ ಗುಣಮುಖರಾಗಲೆಂದು ಕೆಲ ಸಿನಿ ಕಲಾವಿದು ವಿಶ್ ಮಾಡಿದ್ದು, ಆರೂರು ಜಗದೀಶ್ ಮತ್ತೆ ಮೊದಿನ ಜೋಶ್‌ನಲ್ಲಿ ಬಂದು ಜೊತೆ ಜೊತೆಯಲಿ ಸೀರಿಯಲ್ ಶೂಟ್ ಮಾಡಲಿ ಎಂಬುದು ಧಾರಾವಾಹಿ ಪ್ರಿಯರ ಮತ್ತು ಅವರ ಅಭಿಮಾನಿಗಳ ಆಶಯ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.