Bollywood News: ಬಾಾಲಿವುಡ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಖಾಸಗಿ ಕಾರ್ಯಕ್ರಮಕ್ಕಾಗಿ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಪಬ್‌ಗೆ ಆಗಮಿಸಿದ್ದ ಆತನನ್ನು ನೋಡಲು ಹಲವು ಅಭಿಮಾನಿಗಳು ಕೂಡ ಆಗಮಿಸಿದ್ದರು. ಈ ವೇಳೆ ಆರ್ಯನ್ ಖಾನ್ ಮಧ್ಯದ ಬೆರಳು ತೋರಿಸಿ, ಅಸಭ್ಯ ವರ್ತನೆ ತೋರಿದ್ದಾರೆ.
ಈ ವೇಳೆ ಆತನ ಅಕ್ಕಪಕ್ಕ ಕಾಂಗ್ರೆಸ್ ಯುವ ನಾಯಕ ನಲಪಾಡ್ ಮತ್ತು ಜಮೀರ್ ಅಹಮದ್ ಪುತ್ರ ಜೈದ್ ಖಾನ್ ಇದ್ದರು. ಆದರೆ ಅವರು ಈ ಅಸಭ್ಯ ವರ್ತನೆ ಬಗ್ಗೆ ಏನು ರಿಯಾಕ್ಟ್ ಮಾಡಲಿಲ್ಲ.ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಆರ್ಯನ್ ವಿರುದ್ಧ ಕ್ರಮ ಕೈಗ“ಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಅಲ್ಲದೇ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿರುವ ಜನ, ಕಾರ್ಯಕ್ರಮ ನಡೆದು ಹಲವು ದಿನಗಳಾಗಿದೆ. ಎರಡು ದಿನಗಳಿಂದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ ಆದರೂ ಕೂಡ, ಪೋಲೀಸರು ಇನ್ನೂ ಈತನ ವಿರುದ್ಧ ಏಕೆ ಕ್ರಮ ಕೈಗ“ಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಅಸಭ್ಯ ವರ್ತನೆ ತೋರಿದ ಶಾರುಖ್ ಪುತ್ರ: ಅಲ್ಲೇ ಇದ್ದರು ನಲಪಾಡ್ ಮತ್ತು ಜೈದ್ ಖಾನ್

