Friday, March 14, 2025

Latest Posts

ಶಮಂತ್ `ಚೊಂಬು’ ಸಾಂಗ್; ಸುದೀಪ್ ಸಖತ್ ಥ್ರಿಲ್ !

- Advertisement -

www.karnatakatv.net ಶಮಂತ್ `ಚೊಂಬು’ ಸಾಂಗ್; ಸುದೀಪ್ ಸಖತ್ ಥ್ರಿಲ್ ಅಂದಾಕ್ಷಣ ಕ್ಯೂರಿಯಾಸಿಟಿ ಬಿಲ್ಡ್ ಆಗಿರುತ್ತೆ. ಶನಿವಾರ ಬಿಗ್‌ಬಾಸ್‌ನ ಮಿಸ್ ಮಾಡ್ಕೊಂಡವರಿಗೆ ಈ ಚೊಂಬಿನ ಮ್ಯಾಟರ್ ಗೊತ್ತಾಗಿರಲ್ಲ. ಹೀಗಾಗಿ, ದೊಡ್ಮನೆಯಲ್ಲಿ ಶಮಂತ್ ಚೊಂಬು ಮಾಡಿದ ಜಾದು ಬಗ್ಗೆ, ಶಮಂತ್‌ಗೆ ಕಿಚ್ಚನಿಂದ ಸಿಕ್ಕ ಪ್ರಶಂಸೆಯ ಬಗ್ಗೆ ಹೇಳ್ತೀವಿ ಈ ಸ್ಟೋರಿನಾ ಮಿಸ್ ಮಾಡ್ಕೊಬೇಡಿ.

ಶಮಂತ್ ಬಿಗ್‌ಬಾಸ್ ಮನೆಯ ಲಕ್ಕಿ ಕಂಟೆಸ್ಟೆಂಟ್ ಹಾಗೂ ಹುಡುಗೀರ್ ಹಾಟ್ ಫೇವರಿಟ್ ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಹ್ಯಾಂಡ್ಸಮ್ ಲುಕ್‌ನಿಂದ ಹೆಣೈಕ್ಳನ್ನ ಅಟ್ರ್ಯಾಕ್ಟ್ ಮಾಡ್ತಿರೋ ಶಮಂತ್, ತಮ್ಮ ಯೂನಿಕ್ ಟ್ಯಾಲೆಂಟ್‌ನಿಂದ ಬಿಗ್‌ಹೌಸ್‌ನಲ್ಲಿ ಹಲ್‌ಚಲ್ ಎಬ್ಬಿಸುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಶುರುವಾದ್ಮೇಲಂತೂ ಶಮಂತ್ ಹವಾ ದೊಡ್ಮನೆಯಲ್ಲಿ ಜೋರಾಗಿದೆ.

ಬಿಗ್‌ಬಾಸ್ ಫಸ್ಟ್ ಇನ್ನಿಂಗ್ಸ್ ನಲ್ಲಿ ಶಮಂತ್ ಮೇಲೆ ಒಂದು ಕಂಪ್ಲೆಂಟ್ ಇತ್ತು. ಗೇಮ್ಸ್, ಟಾಸ್ಕ್ ನಲ್ಲಿ ಶಮಂತ್ ಇನ್ವಾಲ್‌ಮೆಂಟ್ ತೋರಿಸ್ತಿಲ್ಲ, ಬಿಗ್‌ಹೌಸ್‌ನಲ್ಲೂ ಇದ್ದರೂ ಇಲ್ಲದಂತೆ ಇದ್ದಾರೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಕೊರೊನಾ ಕಾರಣದಿಂದ ದೊಡ್ಮನೆಯಿಂದ ಹೊರಬಂದ ಶಮಂತ್, ನಿದ್ದೆಕಟ್ಟಿಕೊಂಡು ಎಲ್ಲಾ ಎಪಿಸೋಡ್‌ನ ಜಾಲಾಡಿದ್ದಾರೆ. ತನ್ನ ಪ್ಲಸ್-ಮೈನಸ್ ಪಾಯಿಂಟ್‌ನ ಆಪ್ತರಿಂದ-ಕುಟುಂಬಸ್ಥರಿಂದ ತಿಳಿದುಕೊಂಡಿದ್ದಾರೆ. ಹೀಗಾಗಿ, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಧಮಾಕ ಸೃಷ್ಟಿಸಿಕೊಂಡಿದ್ದಾರೆ. ಮಸ್ತ್ ಮನರಂಜನೆ ನೀಡ್ಲೆಬೇಕು ಅಂತ ಫಿಕ್ಸ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿರೋ ಶಮಂತ್, ಚೊಂಬಿನ ಮೇಲೆ ಸಾಂಗ್ ಮಾಡಿ ದೊಡ್ಮನೆ ಸದಸ್ಯರನ್ನ ಮಾತ್ರವಲ್ಲ ಅಭಿನಯ ಚಕ್ರವರ್ತಿಯಿಂದಲೇ ಸೈ ಎನಿಸಿಕೊಂಡಿದ್ದಾರೆ.

ಶಮಂತ್ ಚೊಂಬಿನ ಮೇಲೆ ಬರೆದಿರುವ ಸಾಂಗ್ ಹೇಗಿದೆ ಅನ್ನೋದನ್ನ ನೋಡೋದಕ್ಕೂ ಮುನ್ನ ಚೊಂಬಿನ ಬಿಹೈಂಡ್ ದಿ ಮ್ಯಾಟರ್ ಹೇಳಿಬಿಡ್ತೀವಿ ಕೇಳಿ. ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ಶುರುವಾದ ಮೊದಲ ವಾರ ಪಂಚಾಯ್ತಿ ಕಟ್ಟೆಯಲ್ಲಿ ಚೊಂಬಿನ ಟಾಸ್ಕ್ ಇತ್ತು. ಒಬ್ಬರ ಕೈನಿಂದ ಒಬ್ಬರಿಗೆ ಚೊಂಬು ಪಾಸ್ ಆಗಿ ಕೊನೆಗೆ ಶಮಂತ್ ಕೈಗೆ ಬಂತು. ಮುಂದಿನ ಆದೇಶದವರೆಗೆ ಆ ಚೊಂಬು ನಿಮ್ಮ ಕೈಯಲ್ಲಿರಬೇಕು ಅಂತ ಬಿಗ್‌ಬಾಸ್ ಆದೇಶಿಸಿದರು. ಹೀಗಾಗಿ, ಶಮಂತ್ ಚೊಂಬನ್ನ ಕೈಲಿಡಿದುಕೊಂಡೇ ಇದ್ದರು. ವಿಶೇಷ ಅಂದರೆ ಶಮಂತ್ ನೀರು ಕುಡಿಯೋ ಚೊಂಬನ್ನ ಬರೀ ಚೊಂಬಾಗಿ ನೋಡಲಿಲ್ಲ ಬದಲಾಗಿ ಆ ಕ್ಷಣಕ್ಕೆ ಕವಿಯಾಗಿ ಒಂದು ಗೀತೆಯನ್ನು ಗೀಚಿದರು. ಆ ಗೀತ್‌ಗಾಯನಕ್ಕೆ ಈಗ ಕಿಚ್ಚನಿಂದ ಮೆಚ್ಚುಗೆ ಸಿಕ್ಕಿದೆ.

ರವಿಕಾಣದನ್ನ ಕವಿಕಂಡ ಅನ್ನೋ ಗಾಧೆಯೇ ಇದೆ. ಅದರಂತೇ, ನಮ್ಮ ಶಮಂತ್, ಚೊಂಬನ್ನ ಕೈಲಿಡಿದುಕೊಂಡು ಹುಡುಗ-ಹುಡುಗಿನಾ ಕಣ್ಮುಂದೆ ತಂದುಕೊಂಡು ಒಂದು ಹಾಡನ್ನು ಗೀಚಿದ್ದಾರೆ. ಕಲ್ಲರ್ ಕಲ್ಲರ್ ಕಾಗೆ ಬಂತು... ನನ್ನ ಬಣ್ಣ ವೈಟು ಅಂತು.. ಪಕ್ಕದಲ್ಲೇ ಕುಳಿತು ಹುಡುಗಿ ನಕ್ಕಳಂತೆ... ಅಷ್ಟೇ ಸಾಕು ಹುಡುಗ ಜಾರಿ ಬಿದ್ದನಂತೆ....ಮದುವೆ ಇನ್ವಿಟೇಷನ್ ನನ್ನು ಕೊಟ್ಟಳಂತೆ...ಕಾಲಿದಿಂಬು ಕೈಗೆ ಚೊಂಬು... ಹಿಂದೆಮುಂದೆ ನೋಡಿನಂಬು.. ಹೀಗೆ ಕ್ಯಾಚಿ ಲಿರಿಕ್ಸ್ ಬರೆದು ರ‍್ಯಾಪ್ ಟ್ಯೂನ್ ಹಾಕಿಕೊಂಡುವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಶಮಂತ್ ಚೊಂಬನ್ನ ವರ್ಣಿಸಿದ ಪರಿಗೆ ಕಿಚ್ಚ ಕ್ಲೀನ್‌ಬೋಲ್ಡ್ ಆಗಿದ್ದಾರೆ. ಚಪ್ಪಾಳೆ ಹೊಡೆಯೋ ಮೂಲಕ ಶಮಂತ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಕಿಚ್ಚನಿಂದ ಭೇಷ್‌ಗಿರಿ ಪಡೆದುಕೊಂಡ ಶಮಂತ್ ಸಂತೋಷದಲ್ಲಿ ತೇಲಾಡ್ತಿದ್ದಾರೆ. ಹೀಗೆ, ಶಮಂತ್ ಖುಷಿಖುಷಿಯಾಗಿರಲಿ, ತಮ್ಮ ಯೂನಿಕ್ ಟ್ಯಾಲೆಂಟ್‌ನ ಬಿಗ್‌ಹೌಸ್‌ನಲ್ಲಿ ಶೋಕೇಸ್ ಮಾಡುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಾ ಫೈನಲ್ ತಲುಪಲಿ ಅನ್ನೋದೇ ಎಲ್ಲರ ಆಶಯ

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss