ಹುಬ್ಬಳ್ಳಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಆಪರೇಶನ್ ಹಸ್ತ ಪ್ರಾರಂಭಿಸಿದ್ದು ಅದಕ್ಕಾಗಿ ವಿಪಕ್ಷ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಕಲ ಸಿದ್ದತೆಯನ್ನು ನಡೆಸುತ್ತಿರುವ ಬೆನ್ನಲ್ಲೆ ಕೆಲವು ದಿನಗಳ ಹಿಂದೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಜಿಲ್ಲೆಯಿಂದ ಇಬ್ಬರು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು.ಬಹುಶಃ ಆ ಚರ್ಚೆಗೆ ಇಂದು ತೆರೆ ಬೀಳಬಹುದಾಗಿದೆ.
ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿ ಮುನೇನಕೊಪ್ಪ ಅವರು ಸುದ್ದಿಗೋಷ್ಠಿಯನ್ನು ಕರೆದಿದ್ದು ಇನ್ನಷ್ಟು ತೀರ್ವ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಸಚಿವ ಮುನೇನಕೊಪ್ಪ ಅವರ ಬಿಜೆಪಿ ತೊರೆದು ಕಾಂಗ್ರೆಸ್ ಕುಟುಂಬಕ್ಕೆ ಸೇರಲಿದ್ದಾರಾ ಎನ್ನುವ ಪ್ರಶ್ನೆ ಉದ್ಬವಿಸಿದೆ. ಹಾಗಿದ್ದರೆ ಜಗದೀಶ್ ಶೇಟ್ಟರ್ ಅವರು ಬಿಟ್ಟಿರುವ ಲಿಂಗಾಯತ ಅಸ್ತ್ರ ಯಶಸ್ವಿಯಾಯಿತೆ ?
ಶೇಟ್ಟರ್ ಅವರ ನೆಚ್ಚಿನ ಶಿಷ್ಯರಾದ ಮುನೇನಕೊಪ್ಪ ಹಾಗೂ ಎಸ್ ಐ ಚಿಕ್ಕಗೌಡರಿಗೆ ಹಾಕಿರುವ ಗಾಳಕ್ಕೆ ಸಿಕ್ಕಿಹಾಕಿಕೊಂಡರಾ ? ಎಂಬ ಹಲವು ಪ್ರಶ್ನೆಗಳಿಗೆ ಇಂದು ಮುನೇನಕೊಪ್ಪ ಅವರು ಕರೆದಿರುವ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗಲಿದೆ. ಹುಬ್ಬಳ್ಳಿ ಪ್ರವಾಸಿ ಮಂದಿರಲ್ಲಿ ಮಧ್ಯಾಹ್ನ 12 ಗಂಟೆಗೆ ಮಹತ್ವ ಸುದ್ದಿಗೊಷ್ಠಿ ಕರೆದಿರುವ ಮಾಜಿ ಸಚಿವ ಮುನೇನಕೊಪ್ಪ ಅವರು ಇಂದು ತಮ್ಮ ನಿರ್ಧಾರ ಪ್ರಕಟ ಮಾಡಲಿದ್ದಾರೆ.
‘ನಿವೃತ್ತ ನ್ಯಾಯಮೂರ್ತಿಗಳ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು’
ನೆಹರುರನ್ನು ಬೈಯೋದಕ್ಕೆ ನಿಮಗೆ ಅರ್ಹತೆ ಇದೆಯಾ?: ಬಿಜೆಪಿಗೆ ಸಂತೋಷ್ ಲಾಡ್ ಪ್ರಶ್ನೆ..