Friday, December 13, 2024

Latest Posts

Sheep: ಮಾಂಸಕ್ಕೆ ಹೆಚ್ಚಿನ ಬೇಡಿಕೆ, ಧಾರವಾಡದಲ್ಲಿ ಹೆಚ್ಚಾದ ಮೇಕೆಗಳ ಕಳ್ಳತನ..!

- Advertisement -

ಧಾರವಾಡ: ಕಳ್ಳರು ಮನೆ, ಬೈಕ್,ಬಂಗಾರ ಕಳ್ಳತನ ಕಷ್ಟ ಅಂತಾ ಈಗ ಸುಲಭ ದಾರಿಯೊಂದನ್ನ ಹುಡುಕಿದ್ದಾರೆ. ಅಂದರೆ ಕುರಿ ಹಾಗೂ ಆಡುಗಳ ಕಳ್ಳತನಕ್ಕೆ ಮುಂದಾಗಿದ್ದಾರೆ.

ಒಂದೇ ಒಂದು ದೊಡ್ಡ ಕುರಿ ಅಥವಾ ಆಡು ಕಳ್ಳತನ ಮಾಡಿದರೆ ಸಾಕು ಕಡಿಮೆ ಅಂದರೂ ಹದಿನೈದರಿಂದ ಇಪ್ಪತ್ತು ಸಾವಿರ ಸಿಗುತ್ತೆ ಹೀಗಾಗಿ ಕಳ್ಳರು ಈಗ ಕುರಿ,ಆಡು ಕಳ್ಳತನಕ್ಕೆ ಮುಂದಾಗಿದ್ದಾರೆ.ನಿನ್ನೆ ಧಾರವಾಡ ತಾಲೂಕಿನ ನಿಗದಿ ಗ್ರಾಮದ ಮಲ್ಲನಗೌಡ ಪಾಟೀಲ ಎಂಬುವ ರೈತನಿಗೆ ಸೇರಿದ 23 ಕುರಿ ಮತ್ತು ಆಡುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಆ ಕುರಿ ಮತ್ತು ಆಡುಗಳಿಗೆ ಜನಿಸಿದ ಹದಿನೈದು ದಿನದ ಮರಿಗಳು ಇವೆ. ಆ ಮರಿಗಳಿಗೆ ಮಾಲಿಕರು ಬಾಟಲಿಯಿಂದ ಹಾಲು ಕುಡಿಸುವುದನ್ನ ನೋಡಿದರೆ ಯಾರ ಕರಳು ಚುರ್ರ ಅನ್ನದೇ ಇರದು. ಬುಲೇರೋ ವಾಹನದಲ್ಲಿ ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಧಾರವಾಡ ಗ್ರಾಮೀಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Satish jarakiholi: ಬಿ.ಕೆ ಹರಿಪ್ರಸಾದ್ ಮಾತಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ..!

Hospital: ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪರದಾಟ..!

AAP:ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಸ್ವಂತ ಬಲದಲ್ಲಿ ಸ್ಪರ್ಧಿಸುತ್ತೇವೆ: ಮುಖ್ಯಮಂತ್ರಿ ಚಂದ್ರು

- Advertisement -

Latest Posts

Don't Miss