Shirasi : ದಲಿತ ಮುಖಂಡರಿಂದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಬಹಿಷ್ಕಾರ

Shirasi News : ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕುರಿತಂತೆ ಶಿರಸಿ ತಾಲೂಕ ಆಡಳಿತ ಕಚೇರಿಯಲ್ಲಿ ಕರೆದ ಸಭೆಯನ್ನು ಹಾಗೂ ಕಾರ್ಯಕ್ರಮವನ್ನು ಹಲವಾರು ದಲಿತ ಮುಖಂಡರು ಬಹಿಷ್ಕರಿಸಿ ಹೊರ ನಡೆದ ಘಟನೆ ಇಂದು ನಡೆದಿದೆ.

ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಕಾರ್ಯಕ್ರಮ 11-15 ಆದರೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮ ವಿಳಂಬ ಪ್ರತಿಭಟಿಸಿ ದಲಿತ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರಬಂದಿರುವುದಾಗಿ ತಿಳಿದು ಬಂದಿದೆ.

ತದನಂತರ ವಿಳಂಬವಾಗಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮವನ್ನು ದಲಿತ ಮುಖಂಡರ ಗೈರಾತಿಯಲ್ಲಿ ಆಚರಿಸಿದರೆಂದು ತಿಳಿದು ಬಂದಿದೆ.

About The Author