Saturday, January 18, 2025

Latest Posts

ಬೆಳಗಾವಿ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದು ಆಗ್ರಹಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ

- Advertisement -

Political News: ಇಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಿದ್ದು, ಈ ವೇಳೆ ಮಹಾರಾಷ್ಟ್ರದ ಕೆಲವರು ಪ್ರತಿಭಟನೆ ನಡೆಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಹಾರಾಷ್ಟ್ರದಲ್ಲಿ ಮಾತನಾಡಿದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮಗ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ಬೆಳಗಾವಿ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದು ಆಗ್ರಹಿಸಿದ್ದಾರೆ.

ಪುಣೆಯಲ್ಲಿ ಮಾತನಾಡಿರುವ ಆದಿತ್ಯ ಠಾಕ್ರೆ, ಬೆಳಗಾವಿಯಲ್ಲಿ ಮರಾಠಿಗರನ್ನು ಟಾರ್ಗೇಟ್ ಮಾಡಲಾಗುತ್ತಿದೆ. ಮರಾಠಿಯನ್ನು ತುಳಿಯಲಾಗುತ್ತಿದೆ. ಅಲ್ಲಿ ಮರಾಠಿ ಭಾಷಿಕರ ಸ್ಥಿತಿ ಚಿಂತಾಜನಕವಾಗಿದೆ. ಮರಾಠಿ ಭಾಷಿಗರಿಗೆ ಹೆಚ್ಚು ಅನುದಾನ ನೀಡುತ್ತೇವೆ ಎಂದು ಹಿಂದಿನ ಸಿಎಂ ಹೇಳಿದ್ದರು. ಆದರೆ ಹೇಳಿದ ರೀತಿ ಅನುದಾನ ನೀಡಿದ್ದಾರೆಯೇ..? ಎಂದು ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.

ಇನ್ನು ಆದಿತ್ಯ ತೆಗೆದಿರುವ ಕ್ಯಾತೆಗೆ, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಶಿವರಾಜ್ ತಂಗಡಗಿ, ಬೆಳಗಾವಿಯನ್ನು ಕರ್ನಾಾಟಕದಿಂದ ಬೇರ್ಪಡಿಸುವ ಮಾತೇ ಇಲ್ಲ. ಬೆಳಗಾವಿ ಕನ್ನಡಿಗರ ಆಸ್ತಿ. ಅಧನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರದ ಪರವಾಗಿ ಇನ್ನೆಂದೂ ಬೆಳಗಾವಿ ಸುದ್ದಿಗೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Latest Posts

Don't Miss