ಸಚಿವ ಸ್ಥಾನ ಯಾರಿಗೆ ಕೊಟ್ರೂ, ನನಗೆ ಕೊಟ್ಟಷ್ಟೇ ಸಂತೋಷ- ಶಿವಕುಮಾರ್ ಉದಾಸಿ

www.karnatakatv.net: ರಾಜ್ಯ-ಹಾವೇರಿ: ಸಚಿವ ಸ್ಥಾನ ಯಾರಿಗ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡುವುದು ಪ್ರಧಾನಮಂತ್ರಿಗಳ ಡಿಸ್ಕ್ರೀಟ್ರಿ ಪವರ್ ಎಂದ್ರು. ಇನ್ನು, ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಹೆಸರು ಕೇಳಿ ಬಂದಿರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಅದರ ಬಗ್ಗೆ ಆಲೋಚನೆ ಮಾಡಿಲ್ಲ ಅಂದ್ರು.

About The Author