Shivamogga: ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ಭಾರತೀಯ ಮಜೂರ್ ಸಂಘ, ಕರ್ನಾಟಕದ 70ನೇ ವರ್ಷಾಚರಣೆಯ ಸಮಾರೋಪ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನದ ನಿಮಿತ್ತ ಏರ್ಪಡಿಸಿದ್ದ “ಕುಟುಂಬ ಸಂಗಮ” ಸಮಾರಂಭವನ್ನು ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಹಾಗೂ ಶ್ರೀ ನಾ. ತಿಪ್ಪೇಸ್ವಾಮಿ, ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಶ್ರೀ ರವೀಂದ್ರ ಕ್ಕಿಂಟೆ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಭಾರತೀಯ ಮಜೂರ್ ಸಂಘ, ನವದೆಹಲಿ ಅವರ ಉಪಸ್ಥಿತಿಯಲ್ಲಿ ಸಂಸದ ಶ್ರೀ ಬಿ ವೈ ರಾಘವೇಂದ್ರರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ಶ್ರೀ ಎನ್.ಕೆ ಪ್ರಕಾಶ್ , ರಾಜ್ಯ ಅಧ್ಯಕ್ಷರು, ಭಾರತೀಯ ಮಜೂರ್ ಸಂಘ, ಬೆಂಗಳೂರು, ಶ್ರೀ ಪಟ್ಟಾಭಿರಾಮ್, ದಕ್ಷಿಣ ಪ್ರಾಂತಃ ಸಹ ಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಶ್ರೀ ದುರೈರಾಜ್, ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಭಾರತೀಯ ಮಜೂರ್ ಸಂಘ, ಚೆನ್ನೈ, ಶ್ರೀ ಹೆಚ್.ಎಲ್ ವಿಶ್ವನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ, ಭಾರತೀಯ ಮದ್ದೂರ್ ಸಂಘ ಹಾಗೂ ಜಿಲ್ಲೆಯ ಶಾಸಕರಾದ ಶ್ರೀ ಚನ್ನಬಸಪ್ಪ ಅವರು ಉಪಸ್ಥಿತರಿದ್ದರು.