ಬೆಂಗಳೂರು: ಅವಿನಾಶ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 6 ವಿಕೆಟ್‍ಗಳ ರೋಚಕ ಗೆಲುವು ಸಾಸಿತು. ಈ ಗೆಲುವಿನೊಂದಿಗೆ ಶಿವಮೊಗ್ಗ ಸ್ಟ್ರೈಕರ್ಸ್ ಟೂರ್ನಿಯಿಂದ ನಿರ್ಗಮಿಸಿತು.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಗುಲ್ಬರ್ಗಾ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು. ಶಿವಮೊಗ್ಗ ಸ್ಟ್ರೈಕರ್ಸ್ ವಿಜೆಡಿ ನಿಯಮದಡಿ 54/4 ರನ್ ಗಳಿಸಿ ಗೆಲುವು ಸಾಧಿಸಿತು.
ಸುಲಭ ಮೊತ್ತ ಬೆನ್ನತ್ತಿದ ಶಿವಮೊಗ್ಗ ಸ್ಟ್ರೈಕರ್ಸ್ 15 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ವಿಜೆಡಿ ನಿಯಮದಡಿ ಶಿವಮೊಗ್ಗ ತಂಡಕ್ಕೆ 54 ರನ್ ಗುರಿ ನೀಡಲಾಯಿತು.
ಶಿವಮೊಗ್ಗ ಪರ ಸಿದ್ದಾರ್ಥ್ 18, ಅವಿನಾಶ್ ಅಜೇಯ 11 ರನ್ ಹೊಡೆದು ಇನ್ನು 3 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ನಿಗದಿತ 7 ಓವರ್‍ಗಳಲ್ಲಿ ಶಿವಮೊಗ್ಗ 6.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು.
ಇದಕ್ಕೂ ಮುನ್ನ ಗುಲ್ಬರ್ಗಾ ಪರ ಜೆಸ್ವಂತ್ ಆಚರ್ಯ 22, ಶ್ರೀಜೀತ್ 12, ರಿತೇಶ್ ಭಟ್ಕಳ್ 38 ರನ್ ಗಳಿಸಿದರು. ಗುಲ್ಬರ್ಗಾ ತಂಡ ಈಗಾಗಲೇ ಪ್ಲೇ ಆಫ್ ತಲುಪಿದೆ. ಶಿವಮೊಗ್ಗ ತಂಡ ಗೆಲುವಿನೊಂದಿಗೆ ಟೂರ್ನಿಯಿಂದ ಹೊರ ನಡೆದಿದೆ.
ಸಂಕ್ಷಿಪ್ತ ಸ್ಕೋರ್
ಗುಲ್ಬರ್ಗಾ ಮಿಸ್ಟಿಕ್ಸ್ 118/9
ರಿತೇಶ್ 38, ಜೆಸ್ವಂತ್ 22
ಅವಿನಾಶ್ 24ಕ್ಕೆ 3, ಕಾರ್ಯಪ್ಪ 22ಕ್ಕೆ 2
ಶಿವಮೊಗ್ಗ ಸ್ಟ್ರೈಕರ್ಸ್ 54/4 (6.3ಓವರ್)
ಕೆ.ಸಿದ್ದಾರ್ಥ್ 18, ಅವಿನಾಶ್ 11
ರಿತೇಶ್ 8ಕ್ಕೆ 1, ಪ್ರಣವ್ 11ಕ್ಕೆ 1




