www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಕಳೆದುಕೊಂಡು ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಪುನೀತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದಲ್ಲಿ ಇಬ್ಬರು ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ರು.
ಈ ಬಗ್ಗೆ ಪ್ರತಿಕ್ರಿಯಿದ ಶಿವರಾಜ್ ಕುಮಾರ್ , ಆತ್ಮಹತ್ಯೆಯಂತಹ ಹೇಯ ನಿರ್ಧಾರಗಳನ್ನ ಅಪ್ಪು ಅಭಿಮಾನಿಗಳು ಮಾಡಬಾರದು. ಆತ್ಮಹತ್ಯೆಯಂತಹ ನಡೆ ಅಪ್ಪುಗೆ ಎಂದಿಗೂ ಇಷ್ಟವಾಗುತ್ತಿರಲಿಲ್ಲ. ಎಲ್ಲರಿಗೂ ನಿಮ್ಮದೇ ಆದ ಕುಟುಂಬವಿರುತ್ತೆ. ಅಭಿಮಾನ ಇದ್ರೂ ನೋವು ನುಂಗಿಕೊoಡಿರಬೇಕು ಯಾಕಂದ್ರೆ ಅವರ ಜವಾಬ್ದಾರಿ ನಿಮ್ಮ ಮೇಲಿರುತ್ತೆ. ಅವರನವರ ಕೆಲಸ ಕಾರ್ಯಗಳು ನಡೆಯುತ್ತಿರಬೇಕು. ಜೀವನದಲ್ಲಿ ಬರುವ ನೋವನ್ನು ನುಂಗಿಕೊoಡು ಮುಂದೆ ಸಾಗಬೇಕು . ಶೋ ಶುಡ್ ಗೋ ಆನ್. ಎಲ್ಲಾ ದುಃಖ ಮರೆತು ನಾನು ಹೇಳಿದ ಈ ಮಾತನನ್ನು ದಯವಿಟ್ಟು ನೆನಪಿಟ್ಟುಕೊಳ್ಳಿ ಅಂತ ಶಿವಣ್ಣ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡ್ರು.




