Friday, January 10, 2025

Latest Posts

ಸಿನಿಮಾದಿಂದ ವೆಬ್ ಸಿರೀಸ್ ನತ್ತ ಕಾಲಿಟ್ಟ ಶಿವಣ್ಣ..!

- Advertisement -

‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರ ವಯಸ್ಸು ೬೦ರ ಸನಿಹದಲ್ಲಿದ್ದರೂ ಕೂಡ ಈಗಲೂ ಯಂಗ್ & ಎನರ್ಜಿಟಿಕ್. ಹಲವಾರು ಸಿನಿಮಾಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಸದಾ ಬ್ಯುಸಿಯಾಗಿರುವ ನಟ. ಅಂದಹಾಗೆ, ಶಿವಣ್ಣ ಇದೀಗ ಸಿನಿ ಲೋಕದಿಂದ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಸಿನಿಮಾದಿಂದ ವೆಬ್ ಸಿರೀಸ್ ನತ್ತ ಶಿವಣ್ಣ ಕಾಲಿಟ್ಟಿದ್ದು, ‘ಈಚೆಗೆ ನಡೆದ ಕನ್ನಡದ ಹೊಸ ಓಟಿಟಿ ಆಪ್ ಟಾಕೀಸ್ ಅನ್ನು ಲಾಂಚ್ ಮಾಡಿದ ಮಾತನಾಡಿದ ಶಿವಣ್ಣ, ‘ನಾನು ವೆಬ್ ಸಿರೀಸ್ ಮಾಡ್ತಾ ಇದ್ದೇನೆ. ಅದನ್ನು ನನ್ನ ಮಗಳೇ ನಿರ್ಮಾಣ ಮಾಡಲಿದ್ದಾಳೆ. ಕೋವಿಡ್ ಟೈಮ್‌ನಲ್ಲಿ ನಮಗೆ ವೆಬ್ ಸಿರೀಸ್ ಅಂದ್ರೆ ಏನು ಅನ್ನೋದು ಗೊತ್ತಾಯಿತು. ಬೇರೆ ಬೇರೆ ಥರಹದ ಸಾಕಷ್ಟು ವೆಬ್ ಸಿರೀಸ್‌ಗಳನ್ನು ನೋಡಿ ನಾನು ಕೂಡ ಸಾಕಷ್ಟು ಕಲಿತ್ತಿದ್ದೇನೆ. ಕನ್ನಡ ಕಂಟೆAಟ್‌ನ ತಗೋಳೋದಕ್ಕೆ ಭಯ ಪಡ್ತಾರೆ. ಹಿಂದಿ, ತಮಿಳು, ತೆಲುಗು ಎಲ್ಲ ಭಾಷೆಯ ಕಂಟೆAಟ್ ಹೋಗ್ತಿದೆ. ಆದರೆ ಕನ್ನಡದ ಕಂಟೆAಟ್‌ನ ತೆಗೆದುಕೊಳ್ಳುವುದಕ್ಕೆ ಧೈರ್ಯ ಮಾಡ್ತಾ ಇರಲಿಲ್ಲ. ಈ ಟಾಕೀಸ್ ಟೀಮ್‌ನವರು ಆ ಧೈರ್ಯ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಮ್ಮ ಮಗಳು ವೆಬ್ ಸಿರೀಸ್ ನಿರ್ಮಾಣವನ್ನು ಶುರು ಮಾಡಿ ನಾಲ್ಕು ವರ್ಷ ಆಯ್ತು. ಈಗಾಗಲೇ ‘ಹೇಟ್ ಯೂ ರೊಮಿಯೋ’, ‘ಬೈ ಮಿಸ್ಟೇಕ್’, ‘ಹನಿಮೂನ್’ ಅಂತ ಮೂರು ವೆಬ್ ಸಿರೀಸ್ ಮಾಡಿದ್ದಾಳೆ. ನಮ್ ಹತ್ರ ಇನ್ನೂ ಏಳು ಸ್ಟೋರಿ ಇದೆ. ಒಂದೇ ಸಲಕ್ಕೆ ಏಳು ವೆಬ್ ಸಿರೀಸ್ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ವಿ ಆದರೆ ಕೋವಿಡ್‌ನಿಂದಾಗಿ ಅದನ್ನು ಶುರು ಮಾಡೋಕೆ ಆಗಿರಲಿಲ್ಲ. ಈ ಟಾಕೀಸ್ ಆಪ್ ಬಂದಿರುವುದರಿAದ ಮತ್ತೆ ಧೈರ್ಯ ಮಾಡಿ ಶುರು ಮಾಡ್ತಿವಿ. ನನ್ನ ೧೨೫ನೇ ಸಿನಿಮಾವನ್ನು ನಮ್ಮದೇ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ಅಮ್ಮನಿಂದ ಶುರುವಾದಾಗಿನಿಂದ ಅದು ಸಾಗಿಬರುತ್ತಲೇ ಇದೆ’ ಎಂದು ಶಿವಣ್ಣ ಹೇಳಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

- Advertisement -

Latest Posts

Don't Miss