Tuesday, December 24, 2024

Latest Posts

Shivaraj Tangadagi : ಸರ್ಕಾರದ ಯೋಜನೆ ಜನರಿಗೆ ನೇರವಾಗಿ ತಲುಪಬೇಕು: ಸಚಿವ‌ ತಂಗಡಗಿ

- Advertisement -

State News : ಸರ್ಕಾರದ ಯೋಜನೆ ನೇರವಾಗಿ ಜನರಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ‘ವಿಶ್ವಾಸ್’ ತಂತ್ರಾಂಶ ಹೊರ ತರಲಾಗಿದ್ದು, ಯೋಜನೆಯಿಂದ ಪಾರದರ್ಶಕತೆ ಇರಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಬ್ಯಾಂಕ್ ಆಫ್ ಬರೋಡದ ಸಹಯೋಗದೊಂದಿಗೆ ದೇವರಾಜು ಅರಸು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ  ‘ವಿಶ್ವಾಸ್’ ತಂತ್ರಾಂಶ ಹಾಗೂ ಪಿಒಎಸ್ ಸಾಧನಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಲ‌‌‌ ಮರುಪಾವತಿ‌ ಮಾಡಿಸಿಕೊಳ್ಳುವುದು ಜಿಲ್ಲಾ ಮಟ್ಟದಲ್ಲಿ ಸಮಸ್ಯೆಯಾಗಿತ್ತು. ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಜನರಿಗೆ ಅನುಕೂಲವಾಗಬೇಕೆಂ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡೇ ತಿಂಗಳಲ್ಲಿ

ಈ ತಂತ್ರಾಂಶ ಹೊರ ತರಲಾಗಿದೆ. ನಿಗಮಗಳಿಂದ ನೀಡಲಾಗುವ ಸಾಲ ನೀಡಿಕೆ ಹಾಗೂ ಸಾಲ ಮರುಪಾವತಿಗೆ ಈ ನೂತನ ತಂತ್ರಾಂಶ ಹೆಚ್ಚಿನ ಅನುಕೂಲವಾಗಲಿದ್ದು, ದಲ್ಲಾಳಿಗಳ ಹಾವಳಿ ತಪ್ಪಲಿದೆ. ಪಾರದರ್ಶಕತೆ ಇರಲಿದ್ದು, ಇಲಾಖೆಗೆ ಯಾವುದೇ ವಂಚನೆ‌ ಮಾಡಲು ಸಾಧ್ಯವಿಲ್ಲ. ಫಲಾನುಭವಿಯಿಂದ ಪಡೆಯಲಾದ ಮರುಪಾವತಿ ಮೊತ್ತವೂ ದುರ್ಬಳಕೆಯಾಗದೆ ನಿಗಮದ ಮರುಪಾವತಿ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 12807 ಕೊಳವೆ ಬಾವಿಗಳನ್ನು ಕೊರೆಸಲು ಗುರಿ ಹೊಂದಲಾಗಿದ್ದು, ಇದಕ್ಕೆ 9064 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ‌‌ 203.29 ರೂ.ಕೋಟಿ ವೆಚ್ಚ ಮಾಡಲಾಗುತ್ತದೆ. ಕೊಳವೆ ಬಾವಿ ಕೊರೆಸಿದ ವಾರದೊಳಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಫಲಾನುಭವಿಗಳ ಆಯ್ಕೆ ಪಟ್ಟೆಯನ್ನು ಶಾಸಕರು ಒದಗಿಸಲಿದ್ದಾರೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಸಂಖ್ಯೆ ದೊಡ್ಡದಿದ್ದು, ಇದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಎಲ್ಲ ಸಮಾಜಕ್ಕೂ ನ್ಯಾಯ ಕೊಡಿಸುವ ಕೆಲಸವನ್ನು‌‌ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಪ್ರಮಾಣಿಕವಾಗಿ ಮಾಡಲಾಗುವುದು. ಸರ್ಕಾರ ಯೋಜನೆಗಳನ್ನು ಪ್ರಮಾಣಿಕವಾಗಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಹೊಸ ಕಲ್ಪನೆ‌ ಇಟ್ಟುಕೊಂಡು ಹಾಸ್ಟೆಲ್ ನಿರ್ಮಾಣ ಮಾಡುವ ಚಿಂತನೆ ಇದೆ. ಹಾಸ್ಟೆಲ್ ನಲ್ಲಿ‌ ಗುಣಮಟ್ಟದ ಆಹಾರ ನೀಡಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ವಿದೇಶಕ್ಕೆ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದೇಶಿ ಸಾಲ‌ ಸೇರಿದಂತೆ ಹಲವು ವಿಶೇಷ ಯೋಜನೆಗಳಿವೆ. ಇಂತಹ ಯೋಜನೆಯನ್ನು ಜನರು ಬಳಸಿಕೊಳ್ಳಬೇಕು ಎಂದರು.

ಇದೇ ವೇಳೆ ಅರಿವು ಯೋಜನೆಯ 138 ಫಲಾನುಭವಿಗಳ ಖಾತೆಗೆ 1.20 ಲಕ್ಷ ರೂ.ಹಣವನ್ನು ಡಿಬಿಟಿ ಮೂಲಕ ಜಮಾ‌ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಇಲಾಖೆ ಕಾರ್ಯದರ್ಶಿ ತುಳಸಿ‌ ಮದಿನೇನಿ, ದೇವರಾಜು ಅರಸು ಅಭಿವೃದ್ಧಿ ನಿಗಮದ ಕಾಂತರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

DK Shivakumar : ಶಾಸಕರ ಭವನ ಉದ್ಘಾಟಸಿದ ಡಿಸಿಎಂ ಡಿಕೆಶಿ

Viral video: ಯುವಕನ ಬೆತ್ತಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ಬಾಯಿ ಮುಚ್ಚಿಸಿದ್ರಾ ಪ್ರಭಾವಿಗಳು…?

Rainy season: ಒಂದೇ ಸೀಜನ್ ನಲ್ಲಿ ಎರಡೆರಡು ಅನುಭವ: ರೈತ ಸಮುದಾಯಕ್ಕೆ ಅತಿವೃಷ್ಟಿ ಅನಾವೃಷ್ಟಿ..!

- Advertisement -

Latest Posts

Don't Miss