ಸಿನಿಮಾ ಸುದ್ದಿ: ಶಿವಣ್ಣ ರೈಲ್ವೇ ಮಾಸ್ಟರ್ ಸಮವಸ್ತ್ರವನ್ನು ಹಾಕಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ ಇವರು ಯಾವ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ ಶಿವಣ್ಣ ಬಹುಶಃ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇರಬಹುದಾ ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಶಿವಣ್ಣ ನವರ ನಟನೆ ಬಗ್ಗೆ ಕೇಳಬೇಕೆ ಅವರಿಗೆ ಯಾವುದೇ ಪಾತ್ರ ಕೊಟ್ಟರು ಹಿಂಜರಿಯದೆ ಮಾಡುತ್ತಾರೆ ಅಂದರೆ ಅವರ ದೇಹ ಎಂತಹ ಪಾತ್ರಕ್ಕೆ ಬೇಕಾದರೂ ಹೋಲುತ್ತದೆ ದೊರೆ ಸಿನಿಮಾದಲ್ಲಿ ಕೂಲಿಯಾಳಾಗಿ, ಓಂ ಸಿನಿಮಾದಲ್ಲಿ ಮೊದಲಾರ್ದದಲ್ಲಿ ಅಮಾಯಕನಾಗಿ ಇನ್ನರ್ದದಲ್ಲಿ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ಅದರೆ ಈಗ ಒಂದು ಕಡೆ ಲವರ್ ಬಾಯ್ ಇನ್ನೊಂದು ಕಡೆ ರೈಲ್ವೆ ಮಾಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.
ಈಗಾಗಲೆ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಹಳ್ಳಿಯ ಗಂಭೀರ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಟೀಸರ್ ನಿಂದ ಗೊತ್ತಾಗುತ್ತದೆ.ಅದರ ಜೊತೆಯಲ್ಲಿ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿಯೂ ಸಹ ನಟಿಸುತ್ತಿದ್ದಾರೆ. ಹಾಗಿದ್ದರೆ ಇದು ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಲುಕ್ಎಂದು ಅಭಿಮಾನಿಗಳು ಹ್ಯಾಷ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.
ಇದು ಯಾವ ಸಿನಿಮಾದ ಫೋಟೋಸ್ ಎಂದು ಚಿತ್ರತಂಡವೇ ತಿಳಿಸಬೇಕು.
Shobha karandlaje: ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ.? ನೀವು ಕೊಡೋದು ಯಾವಾಗ
Sandalwood movies: ರಿಷಿ ‘ರಾಮನ ಅವತಾರ’ ಸಿನಿಮಾದ ಮೆಲೋಡಿ ಹಾಡು ಬಿಡುಗಡೆ…
Hostel Hudugaru : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್…! ಅಪ್ಪುಗೆ ವಿಶೇಷ ನಮನ ಸಲ್ಲಿಸಿದ ಚಿತ್ರತಂಡ