ದೇವರ ಆಶೀರ್ವಾದವಿರಬೇಕು, ವಿದ್ಯೆ ಬುದ್ಧಿ ಆರೋಗ್ಯ ಆಯಸ್ಸು ಸಿಗಬೇಕು ಎಂದಾದರೆ ಪ್ರತಿನಿತ್ಯ ಕೆಲ ಶ್ಲೋಕಗಳನ್ನ ತಪ್ಪದೇ ಹೇಳಬೇಕು. ಆ ಶ್ಲೋಕಗಳನ್ನ ಯಾವಾಗ ಮತ್ತು ಯಾಕೆ ಹೇಳಬೇಕು..? ಅದರಿಂದಾಗುವ ಪ್ರಯೋಜನವೇನು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಮೊದಲನೇಯದಾಗಿ ಬೆಳಿಗ್ಗೆ ಎದ್ದ ಬಳಿಕ ಎರಡು ಕೈ ನೋಡಿಕೊಂಡು ಕರಾಗ್ರೆ ವಸತೆ ಶ್ಲೋಕ ಹೇಳಬೇಕು. ತದನಂತರ ಬಲಗಡೆಗೆ ಮುಖ ಮಾಡಿ ಏಳಬೇಕು. ಇದರಿಂದ ನಿಮ್ಮ ದಿನ ಉತ್ತಮವಾಗಿರುತ್ತದೆ. ಶ್ಲೋಕ ಹೇಗೆ ಹೇಳಬೇಕೆಂದರೆ..
ಕರಾಗ್ರೆ ವಸತೆ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ
ಕರಮೂಲೆತು ಸ್ಥಿತಾ ಗೌರಿ, ಪ್ರಭಾತೆ ಕರ ದರ್ಶನಂ
ಈ ಶ್ಲೋಕವನ್ನ ಪ್ರತಿದಿನ ಬೆಳಿಗ್ಗೆ ಎದ್ದಾಗ ಯಾರ ಮುಖವೂ ನೋಡದೇ ನಿಮ್ಮ ಹಸ್ತವನ್ನ ನೋಡಿಕೊಂಡು ಹೇಳಬೇಕು.
ಇದಾದ ಬಳಿಕ ಭೂಮಿಗೆ ಕಾಲು ತಾಕಿಸುವ ಮುನ್ನ, ಭೂಮಿ ತಾಯಿಯಲ್ಲಿ ಕ್ಷಮೆ ಕೇಳಿ ಒಂದು ಶ್ಲೋಕವನ್ನು ಹೇಳಬೇಕು. ಆ ಶ್ಲೋಕ ಹೇಗಿದೆ ಅಂದರೆ,
ಸಮುದ್ರ ವಸನೇ ದೇವಿ ಪರ್ವತಸ್ತನ ಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೆ
ಈ ಶ್ಲೋಕವನ್ನ ಕೂಡ ಪ್ರತಿದಿನ ಬೆಳಿಗ್ಗೆ ಹೇಳಬೇಕು.
ಇನ್ನು ಮೂರನೇಯದಾಗಿ, ಸ್ನಾನವಾದ ಬಳಿಕ ದೇವರ ಮುಂದೆ ದೀಪ ಹಚ್ಚಿ ವಿದ್ಯೆ ಬುದ್ಧಿಗಾಗಿ ಮೂರು ಶ್ಲೋಕವನ್ನು ಹೇಳಬೇಕು. ಮೊದಲನೇ ಶ್ಲೋಕ,
ವಕೃತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೆಶು ಸರ್ವದಾ
ಎರಡನೇ ಶ್ಲೋಕ,
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ
ಮೂರನೇ ಶ್ಲೋಕ
ಜ್ಞಾನಾನಂದ ಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಮ್
ಆಧಾರಾಂ ಸರ್ವವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ
ಈ ಶ್ಲೋಕಗಳನ್ನ ಉತ್ತಮ ವಿದ್ಯೆ ಪಡೆಯಲು ಪ್ರತಿದಿನ ಸ್ನಾನದ ಬಳಿಕ ಹೇಳಬೇಕು.
ಇನ್ನು ರಾತ್ರಿ ನಿದ್ರಿಸುವಾಗ ರಾಯರನ್ನು ಮತ್ತು ರಾಮನನ್ನು ನೆನೆದು ಎರಡು ಶ್ಲೋಕಗಳನ್ನ ಹೇಳಬೇಕು. ಇದನ್ನ ಹೇಳಿದರೆ ಕೆಟ್ಟ ಕನಸ್ಸು ಬೀಳುವುದಿಲ್ಲ. ಮತ್ತು ರಾಯರ ಮತ್ತು ರಾಮನ ಕೃಪೆ ನಿಮ್ಮ ಮೇಲಿರುತ್ತದೆ.
ಮೊದಲನೇ ಶ್ಲೋಕ..
ಪೂಜ್ಯಾಯ ಗುರು ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ
ಎರಡನೇ ಶ್ಲೋಕ
ರಾಮಾಯ ರಾಮಭದ್ರಾಯ ರಾಮ ಚಂದ್ರಾಯ ವೇದಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




