Saturday, October 12, 2024

Latest Posts

ತಪ್ಪಿದ ಮಂತ್ರಿ ಸ್ಥಾನ- ಶೋಭಕ್ಕಾ ಮುನಿಸು, ಮೊಬೈಲ್ ಸ್ವಿಚ್ ಆಫ್…!

- Advertisement -

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರೋ ಶೋಭಾ ಕರಂದ್ಲಾಜೆ ಈ ಬಾರಿಯಾದ್ರೂ ತಮಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತೆ ಅಂತ ನಿರೀಕ್ಷೆಯಿಟ್ಟುಕೊಂಡಿದ್ರು. ಆದ್ರೆ ಇದೀಗ ಕ್ಯಾಬಿನೇಟ್ ನ ಬಹುತೇಕ ಸದಸ್ಯರ ಹೆಸರು ಫೈನಲ್ ಆಗಿದ್ದು, ಶೋಭಾ ಕರಂದ್ಲಾಜೆ ಹೆಸರನ್ನ ಕೈಬಿಡಲಾಗಿದೆ.

ಇದರಿಂದ ಬೇಸರಗೊಂಡಿರೋ ಸಂಸದೆ ಶೋಭಾ ಕರಂದ್ಲಾಜೆ ಬೆಳಗ್ಗಿನಿಂದಲೂ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕ್ಯಾಬಿನೇಟ್ ಮಂತ್ರಿ ಸ್ಥಾನಕ್ಕೆ ಆಯ್ಕೆಯಾದವರಿಗೆ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೂರವಾಣಿ ಕರೆ ಮಾಡಿ ಖಾತರಿಪಡಿಸಿ ನವದೆಹಲಿಗೆ ಬರುವಂತೆ ಸೂಚಿಸಿದ್ದರು. ಆದ್ರೆ ಶೋಭಾ ಕರಂದ್ಲಾಜೆಗೆ ಮಾತ್ರ ಕರೆ ಬರಲಿಲ್ಲ. ಇದರಿಂದ ಬೇಸತ್ತ ಶೋಭಾ ಮುನಿಸಿಕೊಂಡು ತಮ್ಮ ಫೋನ್ ಬಂದ್ ಮಾಡಿಕೊಂಡಿದ್ದಾರೆ.

ಇನ್ನು ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮೋದಿ ಮತ್ತು ಅಮಿತ್ ಶಾರನ್ನು ಭೇಟಿಯಾಗಿ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಲಾಭಿ ನಡೆಸಿದ್ದರು. ಆದ್ರೆ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಮತ್ತು ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಗೆ ಕ್ಯಾಬಿನೇಟ್ ನಲ್ಲಿ ಸ್ಥಾನ ನೀಡಿದ್ದು, ಇದೀಗ ಬಿಎಸ್ವೈ ಗೆ ಹಿನ್ನಡೆಯಾಗಿದೆ.

ಯಡಿಯೂರಪ್ಪಾಗೆ ಬಿಗ್ ಶಾಕ್….!! ಮಿಸ್ ಮಾಡದೇ ಈ ವಿಡಿಯೋ ನೋಡಿ.

- Advertisement -

Latest Posts

Don't Miss