- Advertisement -
www.karnatakatv.net: ರಾಯಚೂರು : ವ್ಯಾಕ್ಸಿನ್ ಹಾಕಿಸಿ ಎಂದರೆ ಮೈಮೇಲೆ ದೇವರು ಬಂದಂತೆ ನಡೆದುಕೊಳ್ಳುತ್ತಿರವ ದೃಶ್ಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಕಂಡು ಬಂದಿದೆ.
ಹೌದು.. ಕೊರೊನಾ ಮಹಾಮಾರಿಯನ್ನು ತಡೆಯಲು ಉಚಿತವಾಗಿ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿ ಮನೆಮನೆಗೆ ಹೋಗಿ ವಾಕ್ಸಿನ್ ಹಾಕಲು ಮುಂದಾಗಿದ್ದಾರೆ. ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗದ ಕರಿಗುಡ್ಡ ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಲು ಸ್ವತಃ ತಹಶಿಲ್ದಾರ್ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಹೋದರೆ ಮೈಮೇಲೆ ದೇವರು ಬಂದAತೆ ನಾಟಕವಾಡುತ್ತಿದ್ದಾರೆ.
ಲಸಿಕೆಯನ್ನು ಹಾಕಲು ಎಷ್ಟು ಪ್ರಯತ್ನ ಪಟ್ಟರೂ ಕೂಡಾ ಸ್ವತಃ ದೇವರೇ ಬೇಡ ಎನ್ನುತ್ತಿರುವಾಗ ನೀವು ಯಾಕೆ ಕೇಳುತ್ತಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -