Wednesday, January 15, 2025

Latest Posts

ಕಿಡ್ನಿ ನೋವಿನಿಂದ ಗಾಯಕ ಸಾವು, ಮರುದಿನ ಅಮ್ಮನ ಬಗ್ಗೆ ಹೊರಬಿತ್ತು ಶಾಕಿಂಗ್ ನ್ಯೂಸ್..!

- Advertisement -

ಕರ್ನಾಟಕ ಟಿವಿ: ಖ್ಯಾತ ಮ್ಯೂಸಿಕ್ ಕಂಪೋಸರ್ ಕಿಡ್ನಿ ಇನ್‌ಫೆಕ್ಷನ್‌ನಿಂದ ಬಳಲಿ ಸಾವನ್ನಪ್ಪಿದ್ದು, ಈ ಘಟನೆ ನಡೆದ ಮರುದಿನವೇ ಈ ಮ್ಯೂಸಿಕ್ ಕಂಪೋಸರ್ ತಾಯಿಯ ಬಗ್ಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಮೊನ್ನೆ ತಾನೇ ಕಿಡ್ನಿ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದ ಬಾಲಿವುಡ್‌ನ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್(42) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಮುಂಬೈನ ಸುರಾನಾ ಆಸ್ಪತ್ರೆಯಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ವಾಜಿದ್ ನಿಧನರಾಗಿದ್ದಾರೆ.

ಪತ್ನಿ ಮರಿಯಮ್ ಆಸಿಫ್ ಸಿದ್ದಕಿ , ವಾಜಿದ್ ಸಹೋದರ ಸಾಜಿದ್, ನಟ ಆದಿತ್ಯ ಪಾಂಚೋಲಿ ವಾಜಿದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್ ಗಣ್ಯರಾದ ಸಲ್ಮಾನ್ ಖಾನ್, ಅಮಿತಾಬ್‌ ಬಚ್ಚನ್, ಪ್ರಿಯಾಂಕಾ ಛೋಪ್ರಾ, ಅಕ್ಷಯ್ ಕುಮಾರ್, ಕರಣ್ ಜೋಹರ್ ಸೇರಿ ಹಲವರು ಟ್ವೀಟ್ ಮಾಡುವ ಮೂಲಕ ವಾಜಿದ್ ನಿಧನಕ್ಕೆ ಸಂತಾಪ ಹೊರಹಾಕಿದ್ದರು.

ಹಲವು ವರ್ಷಗಳಿಂದ ಸೂಪರ್ ಹಿಟ್ ಹಾಡುಗಳನ್ನ ನೀಡುತ್ತಿದ್ದ ಕಂಪೋಸರ್‌ನನ್ನು ಕಳೆದುಕೊಂಡ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದರು. ಆದ್ರೆ ವಾಜಿದ್ ಖಾನ್ ಕುಟುಂಬಕ್ಕೆ ಮತ್ತೊಂದು ಶಾಕ್ ಕಾದಿತ್ತು. ವಾಜಿದ್ ನಿಧನದ ಮರುದಿನವೇ ಅವರ ಅಮ್ಮನಿಗೆ ಕೊರೊನಾ ಪಾಸಿಟಿವ್ ಇರುವ ಸುದ್ದಿ ಹೊರಬಿದ್ದಿದೆ.

ಸದ್ಯ ವಾಜಿದ್ ತಾಯಿ ರಜೀನಾ ಖಾನ್‌ರನ್ನ ಮುಂಬೈನ ಸುರಾನಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಲಿವುಡ್‌ನ ಸೂಪರ್ ಹಿಟ್ ಹಾಡುಗಳನ್ನ ಕಂಪೋಸ್ ಮಾಡುತ್ತಿದ್ದ ಮ್ಯೂಸಿಕ್ ಕಂಪೋಸರ್‌ಗಳಲ್ಲಿ ಸಾಜಿದ್- ವಾಜಿದ್ ಎಂಬ ಸಹೋದರರು ತುಂಬ ಪ್ರಖ್ಯಾತರು. 1998ರಲ್ಲಿ ಸಾಜಿದ್- ವಾಜಿದ್ ಬಾಲಿವುಡ್‌ ಲೋಕಕ್ಕೆ ಪದಾರ್ಪಣೆ ಮಾಡಿದ್ದು, ದಬಂಗ್‌ ಸ್ಟಾರ್ ಸಲ್ಮಾನ್ ಖಾನ್‌ ನಟಿಸಿದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಎನ್ನುವ ಸಿನಿಮಾದಲ್ಲಿ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು.

ಪ್ಲೇ ಬ್ಯಾಕ್ ಸಿಂಗರ್ ಕೂಡ ಆಗಿದ್ದ ವಾಜಿದ್ ಖಾನ್ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ದಬಂಗ್‌ ಸ್ಟಾರ್ ಸಲ್ಮಾನ್ ಖಾನ್‌ಗೆ ಈ ಸಹೋದರರು ತುಂಬಾ ಆತ್ಮೀಯರಾಗಿದ್ದು, ಸಲ್ಮಾನ್ ನಟಿಸುತ್ತಿದ್ದ ಹೆಚ್ಚಿನ ಚಿತ್ರಗಳಲ್ಲಿ ಸಾಜಿದ್- ವಾಜಿದ್ ಕೆಲಸ ಮಾಡಿದ್ದಾರೆ.

https://youtu.be/R-YKp9w77rA

Shravani Somayaji..

- Advertisement -

Latest Posts

Don't Miss