Tuesday, June 3, 2025

Latest Posts

Udupi :ಪ್ರಾಣ ತೆಗೆದ ರೀಲ್ಸ್​ ಕಿತಾ‘ಪತಿ’.. ಕಟ್ಟಿಕೊಂಡವಳನ್ನೇ ಕೊಚ್ಚಿಕೊಂ*ದ ಪಾಪಿಪತಿ

- Advertisement -

ಉಡುಪಿ: ರೀಲ್ಸ್ ಹುಚ್ಚಿಗೆ ಬಿದ್ದಿದ್ದ ಪತ್ನಿಯನ್ನು ಪತಿಯೇ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ನಡೆದಿದೆ.

 

ಮೃತ ಮಹಿಳೆಯನ್ನು 28 ವರ್ಷದ ಜಯಶ್ರೀ ಎಂದು ಗುರುತಿಸಲಾಗಿದೆ. ಆರೋಪಿ ಕಿರಣ್ ಉಪಾಧ್ಯನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಮೃತ ಜಯಶ್ರೀ ಹಾಗೂ ಕಿರಣ್ ದಂಪತಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು.

ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ ಮಾಡೋದ್ರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಜಯಶ್ರೀ ತನ್ನ ಪತಿಯನ್ನ ನಿರ್ಲಕ್ಷ್ಯಿಸುತ್ತಿದ್ದಳು ಎನ್ನಲಾಗಿದೆ.. ಇದರಿಂದ ಬೇಸತ್ತು ಆರೋಪಿ ಕಿರಣ್ ಉಪಾಧ್ಯ ಇಂದು ಬೆಳಗ್ಗೆ ಪತ್ನಿ ಜಯಶ್ರೀಯನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಸದ್ಯ ಕಿರಣ್ ಉಪಾಧ್ಯನನ್ನು ಕೋಟ ಠಾಣೆ ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..

- Advertisement -

Latest Posts

Don't Miss