ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?: ಆರ್.ಅಶೋಕ್ ವಾಗ್ದಾಳಿ

Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಅಕ್ರಮವಾಗಿ ಕೇರಳಂ ರಾಜ್ಯಕ್ಕೆ ಸಾಗಣೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

  • ಸಿಎಂ ಸಿದ್ದರಾಮಯ್ಯ ನವರೇ, ಬಂಡೀಪುರದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಬೇಕಾದ ಅಧಿಕಾರಿಗಳು ಪ್ರತಿ ಲಾರಿಗೆ 300 ರೂ. ‘ವಸೂಲಿ’ ಮಾಡಿಕೊಂಡು ಕಳ್ಳಸಾಗಣೆಗೆ ಸಹಕರಿಸುತ್ತಿರುವ ಅಧಿಕಾರಿಗಳು ಡ್ಯೂಟಿ ಮಾಡುತ್ತಿದ್ದರೋ ಅಥವಾ ನಿಮ್ಮ ಲೂಟಿಗೆ ಸಹಕರಿಸುತ್ತಿದ್ದಾರೋ?
  • ಆರ್‌ಟಿಒ ಮತ್ತು ಪೊಲೀಸ್ ಇಲಾಖೆಯ ಆಶೀರ್ವಾದ ಇಲ್ಲದೆಯೇ ಟಿಪ್ಪರ್‌ಗಳು ನಿಯಮ ಉಲ್ಲಂಘಿಸಿ ಓವರ್‌ಲೋಡ್ ತುಂಬಿಕೊಂಡು ಹೋಗಲು ಸಾಧ್ಯವೇ?
  • ಈ ವ್ಯವಸ್ಥಿತ ದಂಧೆ ಕೆ.ಸಿ.ವೇಣುಗೋಪಾಲ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆಯೇ?
  • ಈ ಕಳ್ಳ ದಂಧೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೂ ಪಾಲು ಇದೆಯೇ?
  • ಕರ್ನಾಟಕಕ್ಕೆ ಸಿಗಬೇಕಾದ ಸಂಪನ್ಮೂಲಗಳನ್ನ, ರಾಜಧಾನವನ್ನ ನೆರೆ ರಾಜ್ಯಕ್ಕೆ ಧಾರೆ ಎರೆಯಲು ಹೊರಟಿರುವ ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?‘

ಹೀಗೆ ಆರ್.ಅಶೋಕ್ ಖಾರವಾಗಿಯೇ ಸಿಎಂ ಸಿದ್ದರಾಮಯ್ಯನವರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ನೇರಕ್ಕೇ ಈ ಮಾಫಿಯಾ ನಡೆಯುತ್ತಿದ್ದರೂ ನೀವು ಮೌನವಾಗಿರುವುದು ನೋಡಿದರೆ, ಈ ‘ಕಲೆಕ್ಷನ್’ ಹಣ ಯಾರ ಜೇಬು ಸೇರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಕನ್ನಡಿಗರ ತೆರಿಗೆ ಹಣ ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಿಡುವುದಿಲ್ಲ. ತಕ್ಷಣವೇ ಆಕ್ರಮ ಸಾಗಾಣಿಕೆಯನ್ನು ನಿಲ್ಲಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

About The Author