Friday, August 8, 2025

Latest Posts

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ನಮಿತಾ

- Advertisement -

Banglore news:

ಬಹುಭಾಷಾ ನಟಿ ನಮಿತಾ ಮತ್ತು ವೀರೇಂದ್ರ ಚೌಧರಿಯ ದಂಪತಿಯಿಂದ ಶುಭ ಸಮಾಚಾರವೊಂದು ಹೊರ ಬಿದ್ದಿದೆ. ಅದೇನೆಂದರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ನಮಿತಾ.

ಈ ಶುಭ ಸುದ್ದಿಯನ್ನು ನಮಿತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಳಿ ಮಕ್ಕಳ ಪೈಕಿ ಒಂದು ಮಗುವನ್ನು ನಮಿತಾ ಮತ್ತು, ಇನ್ನೊಂದು ಮಗುವನ್ನು ಅವರ ಪತಿ ಹಿಡಿದುಕೊಂಡಿದ್ದು, ಮಕ್ಕಳೊಂದಿಗೆ ಮುದ್ದಾಗಿ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹರೇ ಕೃಷ್ಣ ಎಂದು ಸಾಮಾಜಿಕ ಜಾಲತಾಣದಲ್ಲಿ ಬರಹ ಆರಂಭಿಸಿರುವ ಅವರು, ಅವಳಿ ಗಂಡು ಮಕ್ಕಳನ್ನು ನಾವು ಸ್ವಾಗತಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಅವರೊಂದಿಗೆ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ.

ಸಿಹಿ ಸುದ್ದಿಯನ್ನು ಅಭಿಮಾನಿಗಳೂ ಸಂಭ್ರಮಿಸಿದ್ದು, ದಂಪತಿಗೆ ಹಾಗೂ ಮಕ್ಕಳಿಗೆ ಶುಭ ಕೋರಿದ್ದಾರೆ. ಇನ್ನು ವೈದ್ಯರು, ನಮಿತಾಗೆ ಹೆರಿಗೆಯಾದ ರೇಲಾ ಆಸ್ಪತ್ರೆಯ ಸಿಬಂದಿ ಮತ್ತು ಸೇವೆಗಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಖ್ಯಾತ ನಟ ಅನಿರುದ್ಧ್ ಗೆ 2 ವರ್ಷ ಬ್ಯಾನ್ ಬಿಸಿ…?!

 

ಕಿಚ್ಚನ ಹೊಸ ಲುಕ್ ಗೆ ಫಿದಾ ಆದ ಪ್ರೇಕ್ಷಕರು…!

- Advertisement -

Latest Posts

Don't Miss