ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮತ್ತಿಹಳ್ಳಿ ಕೆರೆಯ ಅಕ್ಕ ಪಕ್ಕ ಗಿಡ ನಾಟಿ

Tumakuru: ತಿಪಟೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತುಮಕೂರು -1 ಜಿಲ್ಲಾ ನಿರ್ದೇಶಕರಾದ ಸತೀಷ್ ಸುವರ್ಣ ರವರ ನೇತೃತ್ವದಲ್ಲಿ ಕೆರೆಯಂಗಳದಲ್ಲಿ ಗಿಡನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸತೀಶ್ ಸುವರ್ಣ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದ ರೈತರಿಗೆ ಉಪಯೋಗವಾಗಲೆಂದು ಕೆರೆಗಳನ್ನು ಪುನಶ್ಚೇತನಗೊಳಿಸುವುದರೊಟ್ಟಿಗೆ ಪ್ರಾಣಿ ಪಕ್ಷಿಗಳ ಆಹಾರ ಹಾಗೂ ಸೂರಿನ ವ್ಯವಸ್ಥೆ ಮಾಡುವ ಸಲುವಾಗಿ ಸರಿಸುಮಾರು 10 ಲಕ್ಷಕ್ಕೂ ಅಧಿಕ ಸಸಿಗಳನ್ನು ನಾಟಿ ಮಾಡಿಸಿದ್ದಾರೆ.

ಇದರ ಭಾಗವಾಗಿ ಕೆರೆಯಂಗಳಗಳಲ್ಲಿ ಕಾಡಿನ ಸಸಿಗಳಾದ ಅರಳಿ, ಹೊನ್ನೆ ಮಹಾಗನಿ, ಗಸಗಸೆ, ನೇರಳೆ, ಹೊನ್ನೆ, ಬೀಟೆ ಈ ತರಹದ ಹಲವಾರು ಸಸಿಗಳನ್ನು ನಾಟಿ ಮಾಡಿಲಾಗುತ್ತಿದೆ ಈ ಕೆರೆಯ ಪೋಷಣೆ ಹಾಗೂ ಸಸಿಗಳ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿ ಗ್ರಾಮಸ್ಥರದ್ದಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮತ್ತಿಹಳ್ಳಿ ಗ್ರಾಮದ ಪಟೇಲ್ ಜಯಣ್ಣನವರು ನಮ್ಮ ಪರಿಸರದ ಉಳಿವಿಗಾಗಿ,ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಇಂತಹ ಪುಣ್ಯದ ಕೆಲಸ ಮಾಡಲು ನಮೆಗೆಲ್ಲರಿಗೂ ಅವಕಾಶ ಕಲ್ಪಿಸಿಕೊಟ್ಟಿರುವುದು ಸಂತಸದ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮತ್ತಿಹಳ್ಳಿ ಕೆರೆ ಸಮಿತಿ ಅಧ್ಯಕ್ಷರಾದ ಹರೀಶ್ ರವರು ಮಾತನಾಡಿ ಕೆರೆಯಂಗಳದಲ್ಲಿ ಗಿಡ ನಾಟಿ ಮಾಡುವುದು ಎಷ್ಟು ಮುಖ್ಯವೋ ನಾಟಿ ಮಾಡಿದ ಸಸಿಗಳನ್ನು ಪೋಷಣೆ ಮಾಡುವುದು ಅಷ್ಟೇ ಮುಖ್ಯವಾಗಿರುವುದರಿಂದ ಗ್ರಾಮಸ್ಥರ ಪರವಾಗಿ ಸಸಿಗಳ ಪೋಷಣೆಯ ಸಂಪೂರ್ಣ ಜವಾಬ್ದಾರಿ ನಮ್ಮ ಸಮಿತಿಯವರದ್ದಾಗಿರುತ್ತದೆ ಎಂದು ತಿಳಿಸಿ ಇಂತಹ ಅದ್ಬುತ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಪರಮಪೂಜ್ಯರಾದ ವೀರೇಂದ್ರ ಹೆಗ್ಗಡೆಯವರಿಗೆ ನಾವು ಸದಾ ಚಿರರುಣಿಯಾಗಿರುತ್ತೇವೆಂದು ವಂದಿಸಿದರು.

ನಂತರ ಕಾರ್ಯಕ್ರಮದಲ್ಲಿ ನೆರೆದ ಜನತೆ ಹಾಗೂ ಸಭಿಕರೆಲ್ಲರೂ ಮತ್ತಿಹಳ್ಳಿ ಕೆರೆಯಂಗಳದಲ್ಲಿ 100 ವಿವಿಧ ಸಸಿಗಳನ್ನು ನಾಟಿ ಮಾಡಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇಧಿಕೆ ಸದಸ್ಯರು ಹಾಗೂ ಮತ್ತಿಹಳ್ಳಿ ಗ್ರಾ.ಪಂ.ಸದಸ್ಯರಾದ ಹರೀಶ್ ಗೌಡ,ಗ್ರಾ.ಪಂ.ಸದಸ್ಯರಾದ ರೇಣುಕಮ್ಮ ಓಂಕಾರಮೂರ್ತಿ,ಗ್ರಾಮದ ಮುಖಂಡರಾದ ಪರಮೇಶಯ್ಯ,ಜೆಸಿಬಿ ಮಾಲಿಕರಾದ ಗಣೇಶ್,ಯೋಜನೆಯ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್.ಕೆ,ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್,ವಲಯ ಮೇಲ್ವಿಚಾರಕ ಮನೀಷ್,ಸೇವಾಪ್ರತಿನಿಧಿ ಕಮಲಮ್ಮ ಹಾಗೂ ಮತ್ತಿಹಳ್ಳಿ ಗ್ರಾಮದವರು ಉಪಸ್ಥಿತರಿದ್ದರು.

About The Author