Saturday, March 2, 2024

Latest Posts

ಹೈಕೋರ್ಟ್ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಪ್ರಮಾಣ ವಚನ

- Advertisement -

ಬೆಂಗಳೂರು : ರಾಜ್ಯದ ಹೈಕೋರ್ಟ್ ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಅವರಿಗೆ, ರಾಜ್ಯಪಾಲರಾದ ವಜುಬಾಯಿ ವಾಲಾ ಪ್ರಮಾಣವಚನ ಬೋಧಿಸಿದರು.

ಅಂದಹಾಗೇ, ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿದ್ದ, ದಿನೇಶ್ ಮಹೇಶ್ವರಿ ಅವರು. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ಹಿನ್ನಲೆಯಲ್ಲಿ, ಮುಖ್ಯನ್ಯಾಯಮೂರ್ತಿ ಹುದ್ದೆ ತೆರವಾಗಿತ್ತು.

ಹೀಗಾಗಿ ಕರ್ನಾಟಕ ಹೈಕೋರ್ಟ್ ಗೆ ಮುಖ್ಯನ್ಯಾಯಮೂರ್ತಿಗಳಾಗಿ, ಎ ಎಸ್ ಓಕಾ ಅವರನ್ನು ನೇಮಕಮಾಡುವಂತೆ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರ ನೇತೃತ್ವದ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಈ ಹಿನ್ನಲೆಯಲ್ಲಿ, ರಾಜ್ಯದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಅವರು ಪ್ರಮಾಣವಚನ ಸ್ಪೀಕರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ, ವಿವಿಧ ಗಣ್ಯರು ಹಾಜರಿದ್ದರು.

- Advertisement -

Latest Posts

Don't Miss