ಪಡ್ಡೆಹುಲಿ ಸಿನಿಮಾ ಮೂಲಕ ಬಣ್ಣದ ಜಗತ್ತಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಈಗ ಪವರ್ ಸ್ಟಾರ್. ಅರೇ ಶ್ರೇಯಸ್ ಅದ್ಯಾವಾಗ ಪವರ್ ಸ್ಟಾರ್ ಅಂದ್ರೂ ಅಂತಾ ಕನ್ಫೂಸ್ ಆಗ್ಬೇಡಿ. ಇದು ಪಡ್ಡೆಹುಲಿಯ ಹೊಸ ಸಿನಿಮಾ.

ಪಡ್ಡೆಹುಲಿ ಸಿನಿಮಾ ಸಕ್ಸಸ್ ಬಳಿಕ ವಿಷ್ಣುಪ್ರಿಯ ಸಿನಿಮಾದಲ್ಲಿ ನಟಿಸ್ತಿದ್ದ ಶ್ರೇಯಸ್ ಈ ಸಿನಿಮಾ ರಿಲೀಸ್ ಮೊದ್ಲೆ ಹೊಸ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗಾಂಧಿನಗರದಿಂದ ಡೈರೆಕ್ಟ್ ಆಗಿ ಮಾಲಿವುಡ್ ಗೆ ಎಂಟ್ರಿ ಕೊಟ್ತಿದ್ದಾರೆ. ಪವರ್ ಸ್ಟಾರ್ ಅನ್ನೋ ಟೈಟಲ್ ನಡಿ ಸಿನಿಮಾ ಒಪ್ಪಿಕೊಂಡಿರುವ ಶ್ರೇಯಸ್ ಗೆ ಒರು ಆಡರ್ ಲವ್ ಸಿನಿಮಾ ನಿರ್ದೇಶಕ ಓಮರ್ ಲುಲು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಅಂದಹಾಗೇ ಪವರ್ ಸ್ಟಾರ್ ಸಿನಿಮಾ ಮಾಲಿವುಡ್ ಮಾತ್ರವಲ್ಲ ಕನ್ನಡದಲ್ಲೂ ಬರ್ತಿದ್ದು, ಈಗಾಗ್ಲೇ ಪ್ರಿ-ಪ್ರೊಡಕ್ಷನ್ ವರ್ಕ್ ಶುರುವಾಗ್ತಿದ್ದು, ಸದ್ಯದಲ್ಲಿ ಮತ್ತಷ್ಟು ಅಪ್ ಡೇಟ್ ಸಿಗಲಿದೆ. ಈಗಾಗ್ಲೇ ಪಡ್ಡೆಹುಲಿ ಸಿನಿಮಾ ಮೂಲಕ ಕರುನಾಡಿನ ಮನಸು ಗೆದ್ದಿರುವ ಶ್ರೇಯಸ್ ಮಾಲಿವುಡ್ ಗೂ ಚಿತ್ರರಂಗದಲ್ಲೂ ಚಾಪೂ ಮೂಡಿಸೋದು ಪಕ್ಕಾ.

