ಹುಬ್ಬಳ್ಳಿ: ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ವಿಚಾರ ‘ಬೆದರಿಕೆ ಪತ್ರ ಬಂದಿರುವ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಡುವ ಅಗತ್ಯವಿಲ್ಲವೆಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇವರಿಗೆ ರಕ್ಷಣೆ ನೆನಪಾಗುತ್ತೆ. ಬುದ್ಧಿಜೀವಿಗಳು ಹಸಿ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಎಂದರು. ಹುಬ್ಬಳ್ಳಿಯಲ್ಲಿ ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ‘ಯಾವುದೇ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಟ್ಟು, ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಬುದ್ಧಿಜೀವಿಗಳು ರಕ್ಷಣೆ ಕೇಳಿದ್ದಾರೆ. ಇದು ಬುದ್ದಿಜೀವಿಗಳ ನಿರ್ಲಜ್ಜತನ. ಯಾವುದೇ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಡೋ ಅವಶ್ಯಕತೆ ಇಲ್ಲ. ಅವರಿಗೆ ಯಾವದೇ ಭಯ ಇಲ್ಲ. ಬುದ್ದಿಜೀವಿಗಳು ಅಂದರೆ, ಭಯೋತ್ಪಾದನೆಗೆ, ಹಿಂದೂತ್ವ ವಿರೋಧ ಮತ್ತು ಮತಾಂತರಕ್ಕೆ ಸಹಾಯ ಮಾಡುವುದು. ಭ್ರಷ್ಟಾಚಾರದಲ್ಲಿ ನಮಗೂ ಪಾಲು ಇರಲಿ ಎನ್ನುವ ಕಾರಣಕ್ಕೆ ರಕ್ಷಣೆ ಕೇಳುತ್ತಿದ್ದಾರೆ ಎಂದು ಮುತಾಲಿಕ್ ಕೀಡಿಕಾರಿದ್ದಾರೆ.
Vikrama (Chandrayana-3) ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೆಕವಾದ ಚಂದ್ರಯಾನ-3
Gas tanker: ಸೇತುವೆ ಕೆಳಗೆ ಸಿಲುಕಿಕೊಂಡ ಟ್ಯಾಂಕರ್: ಟ್ಯಾಂಕರ್ ನಲ್ಲಿ ಗ್ಯಾಸ್ ಖಾಲಿ ಆಗುವವರೆಗೆ ರಸ್ತೆ ತಡೆ..!