ಕರ್ನಾಟಕ ಟಿವಿ : ಸ್ಯಾಂಡಲ್ವುಡ್ ನ ಭರವಸೆಯ ನಟ, ಕಾಲಿವುಡ್ ನಲ್ಲೂ ಸೌಂಡ್ ಮಾಡಿದ ಕನ್ನಡಿಗ ತೇಜ್ ಅವರ ರಾಮಾಚಾರಿ 2.0ಗೆ ಮಾರ್ಗರೇಟ್ ಸಿಕ್ಕಿದ್ದಾಳೆ.. ಹೌದು. ಬಾಲನಟನಾಗಿ ಶಂಕರ್ ನಾಗ್ ಅವರ ಜೊತೆ ನಟಿ, ರಿವೈಂಡ್ ಮೂಲಕ ನಟನಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರುವ ತೇಜ್ ಇದೀಗ ರಾಮಾಚಾರಿ 2.0 ಸಿನಿಮಾ ಮಾಡ್ತಿದ್ದಾರೆ.. ತೇಜ್ ಗೆ ಫ್ಯಾಮಿಲಿ ಸ್ಯಾಂಡಲ್ವುಡ್ ನಲ್ಲಿ ಹೆಸರು ಮಾಡಿದ್ರೂ ಅದನ್ನ ಹೆಚ್ಚು ಕ್ಲೈಮ್ ಮಾಡ್ದೆ ತನ್ನ ನಟನೆ ಮೂಲಕ ಬೆಳಿಬೇಕು ಅಂತಿರುವ ಪ್ರತಿಭೆ.. ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರ ಸಹೋದರನ ಪುತ್ರನಾದ ತೇಜ್ ಸ್ಯಾಂಡಲ್ವುಡ್ ನಲ್ಲಿ ಭದ್ರ ನೆಲೆಯೂರಲು ಪಣ ತೊಟ್ಟಿದ್ದಾರೆ.
ಈಗಾಲೇ ರಿವೈಂಡ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದ್ರೆ, ಕೊರೊನಾ ಇಂಡಸ್ಟ್ರಿಗೆ ಕಂಟವಾಗಿರುವ ಕಾರಣ ರಿವೈಂಡ್ ಸಿನಿಮಾ ಬಿಡುಗಡೆ ತಡವಾಗಿದೆ. ಇದೀಗ ರಾಮಾಚಾರಿ 2.0 ಬಹು ನಿರೀಕ್ಷಿತ ಸಿನಿಮಾ ಆಗಿದ್ದು ಮಾರ್ಗರೇಟ್ ಪಾತ್ರಕ್ಕೆ ನಾಯಕಿಯಾಗಿ ಶೃತಿ ಗೊರಾಡಿಯಾ ಆಯ್ಕೆಯಾಗಿದ್ದಾರೆ..

ತೇಜ್ ಉದ್ಯಮಿ ಆಗಿದ್ದರೂ ಸಿನಿ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಮತ್ತಷ್ಟು ಸಿನಿಮಾಗಳನ್ನ ಮಾಡಲು ಪ್ರೇರೇಪಿಸಿದೆ. ಇದೀಷ್ಟೆ ಆದ್ರೆ ಸಾಕಾಗಲ್ಲ. ಕನ್ನಡಿಗರೂ ಸಹ ಇಂಥಹ ಭರವಸೆಯ ನಟರನ್ನ ಕೈಹಿಡಿಯಬೇಕಿದೆ.. ಆಲ್ ದಿ ಬೆಸ್ಟ್ ತೇಜ್..

ಎಂಟರ್ ಟೈನ್ಮೆಂಟ್ ಬ್ಯೂರೋ, ಕರ್ನಾಟಕ ಟಿವಿ