Sunday, September 8, 2024

Latest Posts

ಸಚಿನ್ ದಾಖಲೆ ಮುರಿದ ಶುಭಮನ್ 

- Advertisement -

ಹರಾರೆ: ಚೊಚ್ಚಲ ಶತಕದಲ್ಲೇ ಶುಭಮನ್ ಗಿಲ್ ಮೈಲುಗಲ್ಲು ಮುಟ್ಟಿದ್ದಾರೆ. ಬೌಂಡರಿಳ ಸುರಿಮಳೆಗೈದ ಶುಭಮನ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಜಿಂಬಾಬ್ವೆ ನೆಲದಲ್ಲಿ ತಂಡದ ಅತಿ ಹೆಚ್ಚು ರನ್ ಗಳಿಸಿದ ತಂಡದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. 1998ರಲ್ಲಿ ಬುಲಾವಾಯೊದಲ್ಲಿ ಸಚಿನ್ ತೆಂಡೂಲ್ಕರ್ 130 ಎಸೆತದಲ್ಲಿ ಅಜೇಯ 127 ರನ್ ಗಳಿಸಿದರು. ಇದು ಈವರೆಗಿನ ಭಾರತ ಬ್ಯಾಟರ್ ಗಳಿಸಿದ್ದ ಗರಿಷ್ಠ ಮೊತ್ತವಾಗಿತ್ತು.ಇದೀಗ ಈ ದಾಖಲೆಯನ್ನು ಶುಭಮನ್ ಅಳಿಸಿ ಹಾಕಿದ್ದಾರೆ.

ಶುಭಮನ್ ಚೊಚ್ಚಲ ಶತಕದ ಶುಭಾರಂಭ

ಯುವ ಬ್ಯಾಟರ್ ಶುಭಮನ್ ಗಿಲ್ ಏಕದಿನ ಆವೃತ್ತಿಯ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಕಳೆದ ತಿಂಗಳು ಆತಿಥೇಯ ವೆಸ್ಟ್‍ಇಂಡೀಸ್ ವಿರುದ್ಧ ನಡೆದ ಮೂರನೆ ಏಕದಿನ ಪಂದ್ಯದಲ್ಲಿ  98 ರನ್ ಗಳಿಸಿ ಆಡುತ್ತಿದ್ದಾಗ ಮಳೆ ಬಂದಿದ್ದರಿಂದ ಶುಭಮನ್ 2 ರನ್‍ಗಳ ಅಂತರದಿಂದ ಶತಕ ವಂಚಿತರಾಗಿದ್ದರು. ಇದರಿಂದ ಯುವ ಬ್ಯಾಟರ್ ನಿರಾಸೆ ಅನುಭವಿಸಿದ್ದರು.

ಕ್ರೀಡಾ ಸೂರ್ತಿ ಮೆರೆದ  ದೀಪಕ್ ಚಾಹರ್

ಹರಾರೆಯಲ್ಲಿ ಆತಿಥೇಯ ಜಿಂಬಾಬ್ವೆ  ವಿರುದ್ಧ ವೇಗಿ ದೀಪಕ್ ಚಾಹರ್ ಮಂಕಡಿಂಗ್ ಮಾಡಿ ಗಮನ ಸೆಳೆದರು. ಮಂಕಡಿಂಗ್ ಮಾಡಿ ಮತ್ತೊಂದು ಅವಕಾಶ ಕೊಟ್ಟು ಕ್ರೀಡಾಸೂರ್ತಿ ಮೆರೆದರು.  ಕೈಟಾನೊ ಹಾಗು ಇನೊಸೆಂಟ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.  ದೀಪಕ್ ಚಾಹರ್ ಮೊದಲ ಎಸೆತ ಹಾಕಲು ಹೋದಾಗ ಬ್ಯಾಟರ್ ಕ್ರೀಸ್ ಬಿಟ್ಟಿದ್ದರು. ಚಾಹರ್ ಬೆಲ್ಸ್ ಹಾರಿಸಿದರು. ಆದರೆ ಅಂಪೈಯರ್‍ಗೆ ಮನವಿ ಮಾಡಲಿಲ್ಲ.

- Advertisement -

Latest Posts

Don't Miss