Saturday, October 5, 2024

Latest Posts

‘ಅತೃಪ್ತರು ಮುಂಬೈ ಹೋಗಲು ನಾನು ಕಾರಣ ಅಲ್ಲ- ಸಿಎಂ ಮೇಲೆ ಅವರ ಸಿಟ್ಟು’- ಗುಲಾಂ ನಬಿ ಆಜಾದ್ ಗೆ ಸಿದ್ದು ಉತ್ತರ..!

- Advertisement -

ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಬೆಂಗಳೂರಿಗೆ ಆಗಮಿಸಿರೋ ಎಐಸಿಸಿ ವರಿಷ್ಠ ಗುಲಾಂ ನಬಿ ಆಜಾದ್ ಶಾಸಕರ ಅತೃಪ್ತಿ ಕುರಿತಾಗಿ ರಾಜ್ಯ ನಾಯಕರೊಂದಿಗೆ ಇಡೀ ರಾತ್ರಿ ಚರ್ಚಿಸಿದ್ರು. ಈ ವೇಳೆ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿ ಮೇಲಿನ ಸಿಟ್ಟಿನಿಂದಾಗಿ ಸಮಸ್ಯೆ ಎದುರಾಗಿದೆ ಅಂತ ವರಿಷ್ಠರಿಗೆ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಕಗ್ಗಂಟಾಗುತ್ತಿರೋ ರಾಜಕೀಯ ಬಿಕ್ಕಟ್ಟು ಶಮನಕ್ಕಾಗಿ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿರೋ ಗುಲಾಂ ನಭಿ ಆಜಾದ್ ಸಮಸ್ಯೆಗೆ ಕಾರಣ ತಿಳಿಯೋ ನಿಟ್ಟಿನಲ್ಲಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರ ನಾಯಕರೊಂದಿಗೆ ಚರ್ಚೆ ನಡೆಸಿದ್ರು. ಈ ವೇಳೆ ಸಿದ್ದರಾಮಯ್ಯ, ಅತೃಪ್ತ ಶಾಸಕರು ಮುಂಬೈಗೆ ಹೋಗಲು ನಾನು ಕಾರಣ ಅಲ್ಲ. ಮೊದಲು ಶಾಸಕ ರಮೇಶ್ ಜಾರಕಿಹೊಳಿಯಿಂದಾಗಿ ಸಮಸ್ಯೆ ಶುರುವಾಯ್ತು. ಅವರನ್ನು ಸಮಾಧಾನಪಡಿಸೋದಕ್ಕೆ ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದರೂ ಕೂಡ ಕ್ರಮ ಕೈಗೊಳ್ಳಲಾಗಿರಲಿಲ್ಲ. ಈ ಕುರಿತು ಇಲ್ಲಿರುವ ಶಾಸಕರನ್ನೇ ಕೇಳಿ ಅಂತ ಹೇಳಿರುವ ಸಿದ್ದರಾಮಯ್ಯ, ಶಾಸಕರ ಸಿಟ್ಟು ಇರೋದು ಸಿಎಂ ಕುಮಾರಸ್ವಾಮಿಯವರ ಮೇಲೆ ಅಂತ ಸ್ಪಷ್ಟನೆ ನೀಡಿದ್ದಾರೆ. ಇನ್ನು ಕ್ಷೇತ್ರದ ಅನುದಾನ ಕುರಿತಾಗಿ ಶಾಸಕರ ಸಿಟ್ಟಿನ ಬಗ್ಗೆ ಕುಮಾರಸ್ವಾಮಿಯವರಿಗೆ ನಾನು ಸಾಕಷ್ಟು ಬಾರಿ ಪತ್ರ ಬರೆದಿದ್ರೂ ಕೂಡ ಅವರು ಯಾವುದೇ ಜವಾಬು ಕೊಡಲಿಲ್ಲ ಅಂತ ಗುಲಾಂ ನಭಿ ಆಜಾದ್ ಎದುರು ಸಿದ್ದರಾಮಯ್ಯ ಕಾರಣ ಹೇಳಿದ್ದಾರೆ ಎನ್ನಲಾಗಿದೆ.

ಅಣ್ತಮ್ಮರ ವಿರುದ್ಧ ಸಿಡಿದೆದ್ದ ಸಚಿವ…! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=7E3tzEPu0Mc
- Advertisement -

Latest Posts

Don't Miss