Thursday, November 21, 2024

Latest Posts

ಸಿದ್ದರಾಮಯ್ಯ ಡಬಲ್ ಪೇಮೆಂಟ್ ಮುಖ್ಯಮಂತ್ರಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

- Advertisement -

Hubli News: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಬಲ್ ಪೆಮೆಂಟ್ ಸಿಎಂ ಸಿದ್ಧರಾಮಯ್ಯಾ ಆಗಿದ್ದಾರೆ. ರಾಜ್ಯ ಸರಕಾರದಲ್ಲಿ ಮೀತಿ ಮೀರಿ ಭ್ರಷ್ಟಾಚಾರ ತಾಂಡವಾಡುತಿದೆ. ನಾವು ಅಧಿಕಾರದಲ್ಲಿ ಇದ್ದಾಗ ನಮಗೆ 40 ಪರ್ಸೇಂಟ್ ಸರ್ಕಾರ ಅಂತಾ ಹೇಳತಾ ಇದ್ದರು . ಆದರೆ ಈಗ 40 ಶೇಕಡಾ ಅಲ್ಲಾ ಡಬಲ್ ಪೆಮೆಂಟ್ ಮುಖ್ಯಮಂತ್ರಿ ಸಿದ್ಧರಾಮಯ್ಯಾ ಆಗಿದ್ದಾರೆ. ಅಬಕಾರಿ ಇಲಾಖೆಯ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಶಿಗ್ಗಾಂವಿ ಸೇರಿದಂತೆ ರಾಜ್ಯದಲ್ಲಿ. ಅಭಿವೃದ್ಧಿ ಬಗ್ಗೆ ಜನ ಒಳ್ಳಯ ಅನುಭವಿಸಿದ್ದಾರೆ. ಕಾಂಗ್ರೆಸ್ ನವರಿಗೆ ಶಿಗ್ಗಾವಿ ಜನರ ಭಾವನೆಗಳಿಗೆ ಬಹಳ ವ್ಯತ್ಯಾಸ ಇದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಈಗ ಸರ್ಕಾರ ಅವರದೇ ಇದೆ. ತಾಲೂಕು ಮಟ್ಟದಲ್ಲಿ 200 ಬೆಡ್ ಆಸ್ಪತ್ರೆ ಟೆಕ್ದ್ ಟೈಲ್ ಪಾರ್ಕ್ , ಸವಣೂರಿನಲ್ಲಿ ಆಯುರ್ವೆದಿಕ್ ಕಾಲೇಜ್ , ಐಟಿಐ ಕಾಲೆಜ್, ಪ್ರವಾಹ ಸಂದರ್ಭದಲ್ಲಿ 12000 ಕ್ಕಿಂತ ಹೆಚ್ಚು ಮನೆ ನಿರ್ಮಾಣ. ಬೆಂಗಳೂರಿಗಿಂತ ಒಳ್ಳೆಯ ರಸ್ತೆ ಶಿಗ್ಗಾವಿಯಲ್ಲಿವೆ. ಸಿಎಂ ಕಾರಲ್ಲಿ ಹೋಗುವಾಗ ನಿದ್ದೆ ಮಾಡುತ್ತಿರುತ್ತಾರಾ ಗೊತ್ತಿಲ್ಲ. ಇಡೀ ಸರ್ಕಾರ ನನ್ನ ಮೇಲೆ ದಂಡೆತ್ತಿ ಬಂದಿದೆ‌ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಹೇಳುತ್ತೇನೆ. ವರುಣಾ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಜನ ಏನು ಹೇಳುತ್ತಾರೆ. ಮಂತ್ರಿಗಳು ಶಾಸಕರ ಕ್ಷೇತ್ರಗಳು ಹೇಗಿವೆ ಅವರು ಹೇಳಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಸರ್ಕಾರ ಬಂದ ಮೇಲೆ ಇಂದೆ ಅಭಿವೃದ್ಧಿ ಕೆಲಸಕ್ಕೆ ಹಣ ಬಿಡುಗಡೆ ಮಾಡಿಲ್ಲ. ನಾನು ಇದ್ದಾಗ ಅಲ್ಪ ಸಂಖ್ಯಾತರ ದರ್ಗಾ, ಮಸೀದಿ ಅಭಿವೃದ್ಧಿ ಗೆ 10. ಕೋಟಿ ಕೊಟ್ಟಿದ್ದೆ, ಇವರು ಬಂದು ಅದನ್ನು ವಾಪಸ್ ಪಡೆದುಕೊಂಡಿದ್ದಾರೆ. ಇವರೇನು ಅಲ್ಪ ಸಂಖ್ಯಾತರ ಬಗ್ಗೆ ಮಾತನಾಡುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

ಕನಕ ಗುರುಪೀಠದ ಶ್ರೀ ಗೆ ಬೊಮ್ಮಾಯಿ ಪರ ನಿಲ್ಲಬೇಡಿ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರುವ ಬಸವರಾಜ ಬೊಮ್ಮಾಯಿ,  ಕನಕದಾಸ ಗುರು ಪೀಠದ ಸ್ವಾಮೀಜಿ ಬಗ್ಗೆ ಒಬ್ಬ ಮುಖ್ಯಮಂತ್ರಿಯಾಗಿ ಗುರುಗಳಿಗೆ ದಾಷ್ಟ್ಯದ ಮಾತು ಹೆಳುವುದು ಸರಿಯಲ್ಲ. ಅವಮಾನ ಮಾಡಿದಂತೆ‌ ಅವರು ನಮ್ಮ ಗುರುಗಳು, ಚುನಾವಣೆ ಸೋಲಿನ ಭಯದಲ್ಲಿ ಸಿಎಂ ಸ್ವಾಮಿಜಿಯನ್ನು ಎಳೆ ತರುವ ಪ್ರಯತ್ನ ಮಾಡಿದ್ದಾರೆ. ಮುಡಾ ಪ್ರಕರಣ ಕ್ಕೆ ಕೋರ್ಟ್ ಆದೇಶ ಇದೆ. ಸಿಎಂ ಒಬ್ಬ ಹಾಲಿ ಸಿಎಂ ಆಗಿ ತನಿಖೆಗೆ ಹಾಜರಾಗುತ್ತಿರುವುದು ಇದೇ ಮೊದಲು ಎಂದು ಸಿದ್ದರಾಮಯ್ಯ ಬಗ್ಗೆ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ತಹಸೀಲ್ದಾರ, ಸಚಿವೆ ಪಿಎ ಮೇಲೆ ಎಫ್ ಐ ಆರ್ ದಾಖಲು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸರ್ಕಾರಿ ನೌಕರರು ರಾಜಕೀಯ ಒತ್ತಡದಿಂದ ರೋಸಿಹೊಗಿದ್ದಾರೆ. ಶಾಲೆಯ ಟೀಚರ್ ಗಳಿಗೆ ಮಂತ್ಲಿ ಫಿಕ್ದ್ ಮಾಡಲು ಹೊರಟಿದ್ದಾರೆ‌. ಲಕ್ಷ್ಮೀ ಹಬ್ಬಾಳ್ಕರ್ ಪಿಎ ಹೆಸರು ಹೇಳಿ ಆತ್ಮಹತ್ಯೆ ಪ್ರಕರಣ ತನಿಖೆಯಾಗಲಿ. ಕಾಂಟ್ರಾಕ್ಟರ್ ಅಸೋಸಿಷಯೇಷನ್ ಅವರು ನಮ್ಮ ಮೇಲೆ ಆರೋಪ ಮಾಡಿದಾಗ ದೊಡ್ಡದಾಗಿ ಮಾತನಾಡಿದ್ದರು. ಈಗ ಅವರ ವಿರುದ್ದ ಆರೋಪ ಬಂದಿದೆ ಈಗೇನು ಹೇಳುತ್ತಿದ್ದಾರೆ‌. ಈಗ ಪೇ ಡಬಲ್ ಸಿಎಂ ಆಗಿದೆ‌. ಮಂತ್ರಿಗಳಿಗೆ ಒಂದ ಪಾಲು ಸಿಎಂಗೆ ಒಂದು ಪಾಲು ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.

- Advertisement -

Latest Posts

Don't Miss