Wednesday, June 7, 2023

Latest Posts

‘ನಂದು ಹಳ್ಳಿ ಭಾಷೆ- ಅದನ್ನೇ ದುರಹಂಕಾರ ಅಂತಾರೆ ಏನ್ ಮಾಡ್ಲಿ?’- ಸಿದ್ದು ಟಾಂಗ್

- Advertisement -

ಮೈಸೂರು: ಸಿದ್ದರಾಮಯ್ಯಗೆ ದುರಹಂಕಾರ ಅನ್ನೋ ರೋಷನ್ ಬೇಗ್ ಮತ್ತು ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಹಳ್ಳಿಯವನು, ನನ್ನದು ಹಳ್ಳಿ ಭಾಷೆ ನೇರವಾಗಿ ಮಾತನಾಡ್ತೀವಿ. ಆದರೆ ಇದು ಕೆಲವರಿಗೆ ಹಿಡಿಸೋದಿಲ್ಲ. ಸ್ವಾಭಿಮಾನ ಇಲ್ಲದವರಿಗೆ ಮತ್ತು ಸೋಗಲಾಡಿತನ ಉಳ್ಳವರಿಗೆ ನಾನು ಯಾವಾಗಲೂ ದುರಹಂಕಾರಿಯಾಗಿಯೇ ಕಾಣಿಸ್ತೀನಿ. ನಮ್ಮ ನಾಡು- ನುಡಿ, ನೆಲ-ಜಲ ಪರ ಇದ್ದೀವಾ, ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿತೀವಾ ಅನ್ನೋದು ಮುಖ್ಯವಾಗುತ್ತೆ ಹೊರತು ಯಾರು ಯಾವ ರೀತಿ ಮಾತನಾಡ್ತಾರೆ ಅನ್ನೋದು ಮುಖ್ಯವಲ್ಲ ಅಂತ ರೋಷನ್ ಬೇಗ್ ಗೆ ಸಿದ್ದರಾಮಯ್ಯ ಚಾಟಿ ಬೀಸಿದ್ರು.

ಮೋದಿ ಜೊತೆ ಕೈ ಜೋಡಿಸ್ತಾರಾ ರೋಷನ್ ಬೇಗ್? ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್ . ತಪ್ಪದೇ ನೋಡಿ.

- Advertisement -

Latest Posts

Don't Miss