ಮತಬ್ಯಾಂಕ್ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಹೀಗೆ ಪುಕ್ಕಟೆ ಹೇಳಿಕೆ ನೀಡಬಾರದು: ಅರವಿಂದ್ ಬೆಲ್ಲದ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಅರವಿಂದ್ ಬೆಲ್ಲದ್ ಮಾತನಾಡಿದ್ದು,  ಪಾಕಿಸ್ತಾನದ ಜೊತೆ ಯುದ್ಧ ಅವಶ್ಯಕತೆಯಿಲ್ಲ ಎಂಬ ಸಿಎಂ‌ ಸಿದ್ಧರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಿದ್ಧರಾಮಯ್ಯ ಅವರ ಈ‌ ಅಬಾಲಿಶತನ‌ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಇದು‌ ಮುಸ್ಲಿಂರ ಓಲೈಕೆ ಮಾಡುವಂತಹ‌ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಪಾಕಿಸ್ತಾನ‌ ಮುಸ್ಲಿಂ ದೇಶವಾಗಿದೆ. ಆ‌ ದೇಶದ‌ಮೇಲೆ ಯುದ್ಧ ಮಾಡುವುದರಿಂದ ಇಲ್ಲಿನ‌ ಮುಸ್ಲಿಂರು ಏನಾದ್ರೂ ತಿಳಿದುಕೊಳ್ತಾರೆ ಅಂತಾ ಸಿದ್ಧರಾಮಯ್ಯ ತಿಳಿದುಕೊಂಡಿದ್ದಾರೆ. ಹೀಗಾಗಿ ಈ ರೀತಿ ಹೇಳಿಕೆ‌‌ ನೀಡುತ್ತಿದ್ದಾರೆ. ಭಾರತದ ಹಿತದೃಷ್ಠಿಯಿಂದ‌ ಯಾವ ರೀತಿ‌ ಪಾಕಿಸ್ತಾನವನ್ನ ಮಟ್ಟಹಾಕಬೇಕು‌ ಆ ಕೆಲಸಗಳಾಗುತ್ತವೆ. ಯಾವುದು‌ ಸರಿ‌ ಯಾವುದು ತಪ್ಪು‌ಅನ್ನೋ‌ ಬಗ್ಗೆ ಪ್ರಧಾನಿ‌ ಮೋದಿಯವರು ನಿರ್ಧಾರ ತೆಗೆದುಕೊಳ್ತಾರೆ. ಮತಬ್ಯಾಂಕ್ ರಾಜಕೀಯಕ್ಕಾಗಿ ಈ‌ ರೀತಿ‌ ಸಿದ್ಧರಾಮಯ್ಯ ಅವರು ಪುಕ್ಕಟೆ ಹೇಳಿಕೆ ನೀಡಬಾರದು. ಖರ್ಗೆಯವರು ಸಹ ಈ‌ ರೀತಿ ಹೇಳಿಕೆ ನೀಡಬಾರದು ಎಂದು ಬೆಲ್ಲದ್ ಹೇಳಿದ್ದಾರೆ.

ಕಾಶ್ಮೀರದಲ್ಲಿ‌ ಕೇಂದ್ರ ಸರ್ಕಾರದಿಂದ‌ ಭದ್ರತಾ ಲೋಪವಾಗಿದೆ ಎಂಬ‌ ಕಾಂಗ್ರಸ್ ನಾಯಕರ ಹೇಳಿಕೆಗೆ ಬೆಲ್ಲದ್ ತಿರುಗೇಟು ನೀಡಿದ್ದು,  ಕಾಂಗ್ರೆಸ್ ಪಕ್ಷ ಈ‌‌ ಹಿಂದೆ‌ ರಾಜ್ಯಭಾರ ಇದ್ದ ಸಂದರ್ಭ‌ ಯಾವ ಪರಿಸ್ಥಿತಿ‌ ಇತ್ತು..? ಮೋದಿಯವರು‌‌ ಅಧಿಕಾರಕ್ಕೆ‌ ಬಂದಾಗಿನಿಂದ ಯಾವ ಪರಿಸ್ಥಿತಿ‌ ಇದೆ‌ ಅನ್ನೋದನ್ನ‌ ಮನವರಿಕೆ‌ ಮಾಡಿಕೊಳ್ಳಬೇಕು. ರಾಷ್ಟ್ರದ ಸುರಕ್ಷತೆ ವಿಚಾರದಲ್ಲಿ‌ ಕಾಂಗ್ರೆಸ್ ನವರು‌ ಅವಲೋಕನ‌ ಮಾಡಿಕೊಳ್ಳಬೇಕು. ಪಾಕಿಸ್ತಾನವನ್ನ ಬಗ್ಗು ಬಡಿಯುವ ನಿಟ್ಟಿನಲ್ಲಿ‌ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತದೆ. ಇದನ್ನ ರಾಜಕೀಯವಾಗಿ ಬಳಸಿಕೊಳ್ಳೋದು ಸರಿಯಲ್ಲ. ದೇಶದ ರಕ್ಷಣೆ ವಿಚಾರವಾಗಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

About The Author