Sunday, March 3, 2024

Latest Posts

ಏನಯ್ಯಾ, ನೀನೊಬ್ಬ ಲೀಡರ್ರಾ..? – ಸಚಿವರಿಗೆ ಸಿದ್ದು ಕ್ಲಾಸ್

- Advertisement -

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಧ್ರುವನಾರಾಯಣ್ ಸೋತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೈಸೂರಿನಲ್ಲಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಪುಟ್ಟರಂಗ ಶೆಟ್ಟಿ ಬಂದಿದ್ದ ವೇಳೆ ಈ ಪ್ರಸಂಗ ನಡೆದಿದೆ. ಪುಟ್ಟರಂಗಶೆಟ್ಟಿಯನ್ನು ಕಂಡ ಸಿದ್ದು ಏಕಾಏಕಿ-‘ಏನಯ್ಯ, ನಿಮ್ಮ ಭಾಗದಲ್ಲೇ ಅಂತರ ಕಡಿಮೆ ಬಂದಿದೆ. ಈ ರೀತಿ ಮಾಡಿದ್ರೆ ಹೆಂಗಯ್ಯ’ ಅಂತ ಸಿಡಿಮಿಡಿಗೊಂಡ ಸಿದ್ದರಾಮಯ್ಯ,-‘ನೀನೊಬ್ಬ ಲೀಡರ್ರಾ’ ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಈ ರೀತಿ ಹೇಳುತ್ತಿದ್ದಂತೆ ಮುಜುಗರಕ್ಕೀಡದ ಸಚಿವ ಪುಟ್ಟರಂಗಶೆಟ್ಟಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ದ್ರುವನಾರಾಯಣ್ ವಿರುದ್ಧ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಕೇವಲ 341 ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು.

ಚುನಾವಣೆ ಫಲಿತಾಂಶದ ಬಗ್ಗೆ ಡಿಕೆಶಿ ಏನಂದ್ರು ಗೊತ್ತಾ….ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=IOlIJ_dsQkk

- Advertisement -

Latest Posts

Don't Miss