ನೀವೇ ಹೀಗೆ ಮಾಡಿದ್ರೆ ಹೇಗೆ? ವೇದಿಕೆಯಲ್ಲೇ ಗರಂ ಆದ ಸಿದ್ದು!

ಬೆಂಗಳೂರಿನಲ್ಲಿ ನಡೆದ ‘ಶೂದ್ರ ಸೇವಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದ್ಯಾವಂತರೇ ಜಾತಿ ವ್ಯವಸ್ಥೆ ಹಾಗೂ ಮೌಡ್ಯಗಳನ್ನು ಮೈಗೂಡಿಸಿಕೊಂಡಿರುವುದು ದುರದೃಷ್ಟಕರ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಮಸಮಾಜ ನಿರ್ಮಾಣದ ಕುರಿತು ಅವರು ವ್ಯಕ್ತಪಡಿಸಿದ ಪ್ರಮುಖ ವಿಚಾರಗಳ ಬಗ್ಗೆ ಇಲ್ಲಿದೆ ನೋಡಿ ಆ ವರದಿ.

ಎಸ್ ‘ನಗರದ ಗಾಂಧಿ ಭವನದಲ್ಲಿ ಶೂದ್ರ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲು ಸಮಾಜದಲ್ಲಿ ಸಮಾನತೆ ನೆಲೆಸಬೇಕು ಹಾಗೂ ಅದಕ್ಕಾಗಿ ವಿದ್ಯಾವಂತರು ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿಯಬೇಕು ಎಂದು ಕರೆ ನೀಡಿದರು. ಚಾತುರ್ವರ್ಣ ವ್ಯವಸ್ಥೆಯನ್ನು ಮನುವಾದಿಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ್ದು, ಇದರ ಪರಿಣಾಮವಾಗಿ ಶೂದ್ರ ವರ್ಗವು ಹಲವು ವರ್ಷಗಳ ಕಾಲ ಅಕ್ಷರ ಸಂಸ್ಕೃತಿ ಹಾಗೂ ಅವಕಾಶಗಳಿಂದ ದೂರವಿರುವಂತೆ ಮಾಡಲಾಯಿತು ಎಂದು ಅವರು ಹೇಳಿದರು.

ಸಮಾಜದಲ್ಲಿದ್ದ ಒಡಕು ಹಾಗೂ ಭಿನ್ನಾಭಿಪ್ರಾಯಗಳನ್ನೇ ಬ್ರಿಟಿಷರು ತಮ್ಮ ಅನುಕೂಲಕ್ಕೆ ಬಳಸಿಕೊಂಡು ದೇಶವನ್ನು ಆಳಿದರು ಎಂದು ತಿಳಿಸಿದ ಅವರು, ಈಗಲಾದರೂ ಎಲ್ಲಾ ವರ್ಗಗಳು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಎಲ್ಲ ವರ್ಗಗಳು ಒಂದಾಗುವುದನ್ನು ಬಯಸುವುದಿಲ್ಲ ಎಂದ ಸಿದ್ದರಾಮಯ್ಯ, ಶೋಷಿತರು ಮತ್ತು ಅವಕಾಶ ವಂಚಿತ ವರ್ಗಗಳು ಒಗ್ಗಟ್ಟಾಗಿ ಸಮಾನತೆಯ ಹೋರಾಟ ನಡೆಸಬೇಕು ಎಂದರು.

ಇನ್ನು ಅದರ ಜೊತೆಗೆ ‘ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿನ ಅಸಮಾನತೆ ನಿವಾರಣೆಗೆ ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಯುವ ಪೀಳಿಗೆ ಕಡ್ಡಾಯವಾಗಿ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಎಚ್ಚರಿಸಿರುವ ಅವರು, ವ್ಯವಸ್ಥೆಯ ಬದಲಾವಣೆ ಒಂದೇ ದಿನದಲ್ಲಿ ಸಾಧ್ಯವಿಲ್ಲವಾದರೂ, ಸರಿಯಾದ ಮಾರ್ಗದಲ್ಲಿ ನಿರಂತರ ಪ್ರಯತ್ನ ನಡೆಸಿದರೆ ಯಶಸ್ಸು ದೊರೆಯಲಿದೆ ಎಂದು ಪ್ರತಿಪಾದಿಸಿದರು.

About The Author