Banglore News : ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕೆಂದು ಸಂವಿಧಾನದಲ್ಲಿ ಹೇಳಿರುವಂತೆ ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದಿದ್ದು ರಾಹುಲ್ ಗಾಂಧಿಯವರಿಗೆ ನ್ಯಾಯ ದೊರೆತಿದ್ದು ಅದು ಪ್ರಜಾಪ್ರಭುತ್ವಕ್ಕೆ ಸಂದಿರುವ ಜಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಲಾಲ್ ಬಾಗ್ ನಲ್ಲಿ ಫಲಪುಷ್ಟಪ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಶಿಕ್ಷೆಯನ್ನು ವಿಧಿಸಿ ಸೂರತ್ ನ್ಯಾಯಾಲಯ ತೀರ್ಪು ನೀಡಿತ್ತು. ಆ ತೀರ್ಪಿಗೆ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ರಾಹುಲ್ ಗಾಂಧಿಯವರ ಲೋಕ ಸಭಾ ಸದಸ್ಯತ್ವ ಮುಂದುವರೆಯುವ ರೀತಿಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು ಕಾನೂನನ್ನು ಎತ್ತಿಹಿಡಿಯುವ ಗೌರವಿಸುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ ಎಂದರು.
Rahul Gandhi : ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹವಾದಷ್ಟೇ ಬೇಗ ಆದೇಶ ತೆರವಾಗಬೇಕು : ಡಿಸಿಎಂ ಡಿ.ಕೆ.ಶಿ
Shivaraj Tangadagi : ಹತಾಶೆಯಿಂದ ಹೆಚ್.ಡಿ.ಕೆ ಮಾತನಾಡುತ್ತಿದ್ದಾರೆ : ಸಚಿವ ತಂಗಡಗಿ
Siddaramaiah : ಹೆಚ್.ಡಿ ಕುಮಾರಸ್ವಾಮಿ ಆರೋಪಗಳು ಹಿಟ್ ಆ್ಯಂಡ್ ರನ್ ಕೇಸ್ : ಸಿಎಂ ಸಿದ್ದರಾಮಯ್ಯ

