- Advertisement -
political story :
ಪ್ರಜಾಧ್ವನಿ ಯಾತ್ರೆಯಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅವರು ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು. ಈಗ ಚುನಾವಣೆ ಇರುವ ಹಿನ್ನೆಲೆ ಬಿಜೆಪಿಯವರು ಪ್ರಧಾನಿ ಮೋದಿಯವರನ್ನು ಕರೆಯಿಸಿ ನಾವೇ ಮಾಡಿದವರೆಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದರು. ಇವರು ಏನೇ ಮಾಡಿದ್ರು ಬಿಜೆಪಿ ಗೆಲ್ಲಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ ಹಕ್ಕು ಪತ್ರ ವಿತರಣೆಗೆ ಮೊದಲು ಸಮತಿಯನ್ನ ತಂದಿದ್ದೆ ನಾವು ಎಂದು ಗುಡುಗಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಅಶ್ವತ್ ನಾರಾಯಣ್, ಕಾಂಗ್ರೆಸ್ ಯಾಕೆ ಎಲ್ಲ ಅರ್ಧ ಕೆಲಸ ಮಾಡುತ್ತೆ ಆ ಕೆಲಸ ಪೂರ್ಣ ಯಾಕೆ ಮಾಡಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
- Advertisement -